ಅವಹೇಳನಕಾರಿ ಹೇಳಿಕೆ: ಖಂಡನೆ
ಗುಲ್ಬರ್ಗ: ಶಂಕರಾಚಾರ್ಯರ ಬಗ್ಗೆ ಕೇಶವ ಮೂರ್ತಿ ಅವಹೇಳನಕಾರಿ ಹೇಳಿಕೆ ನೀಡಿರುವ ಕ್ರಮವನ್ನು ವಿಪ್ರ ಮುಖಂಡರು ಖಂಡಿಸಿದ್ದಾರೆ. ನಗರದ ಕೃಷ್ಣ ಮಂದಿರದಲ್ಲಿ ನವಲಿ ಕೃಷ್ಣಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖಂಡರು ಮಂಡ್ಯದ ಕೇಶವ ಮೂರ್ತಿ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು. ವಿಪ್ರ ಮುಖಂಡರು, ವಿದ್ಯಾರ್ಥಿ ನಿಲಯದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.