ಇಂದು ದರಪಟ್ಟಿ ಆಹ್ವಾನ
ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕೊಠಡಿಗೆ ಉತ್ತಮ ಗುಣಮಟ್ಟದ ಪೀಠೋಕರಣಗಳು ಸರಬರಾಜು ಮಾಡಲು ದರಪಟ್ಟಿ ಕರೆಯಲಾಗಿದೆ. ದರಪಟ್ಟಿ ಮೇ 23ರ 3.30ಗಂಟೆಯೊಳಗೆ ಸಲ್ಲಿಸಬೇಕು. ಸೋನಿ ಎಲ್.ಸಿ.ಡಿ. ಟಿವ್ಹಿ, ಫ್ರೀಜ್ 100 ಲೀಟರ್(ಎಲ್.ಜಿ.) ಟಾಟಾ ಸ್ಯಾಮ ಡಿ.ಟಿ.ಎಚ್, ಎಕ್ಸಿಕ್ಯೂಟಿವ್ ಚೇರಿ, ಆಫೀಸ್ ಟೇಬಲ್, ಚೇರ್ ಮತ್ತು ಕಂಪ್ಯೂಟರ್ ಟೇಬಲ್ ತಲಾ ಒಂದರಂತೆ ಹಾಗೂ ವಿಜಿಟರ್ಸ ಚೇರಿ-24 ಸಂಖ್ಯೆ ಸರಬರಾಜಿಗಾಗಿ ದರಪಟ್ಟಿ ನೀಡುವಂತೆ ಗುಲ್ಬರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೋರಿದ್ದಾರೆ. ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಇಂದು ಬೈಕ್ಗಳ ಹರಾಜು
ಗುಲ್ಬರ್ಗ: ನಗರದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸ್ವಾಧೀನ ಪಡಿಸಿಕೊಂಡ ಅಪಘಾತ ಪ್ರಕರಣಗಳಲ್ಲಿ ಮತ್ತು ವಾರಸುದಾರರ ಇಲ್ಲದ ಹೀರಾ ಹೊಂಡಾ ಮೋಟಾರ್ ಸೈಕಲ್, ಸ್ಕೂಟರ್, ಸ್ಕೂಟಿ, ಟಿವಿಎಸ್ ಚಾಂಪ್, ಲೂನಾ, ಬಜಾಜ್ ಬಾಕ್ಸರ್ ಹೀಗೆ ಒಟ್ಟು 29 ಬೈಕ್ಗಳನ್ನು ಮೇ 23ರಂದು ಹೆಚ್ಚುವರಿ ಪೊಲೀಸ್ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ಹಮ್ಮಿಕೊಳ್ಳಲಾಗಿದೆ. ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಸಾರ್ವಜನಿಕರು ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ಹರಾಜಿನ ಷರತ್ತುಗಳಿಗೆ ಬದ್ಧರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9480803554, 9480803555, 08472- 263624, 263625ಗೆ ಸಂಪರ್ಕಿಸಲು ಕೋರಲಾಗಿದೆ.
ಇಂದು ಸಾಹಸ ಪ್ರದರ್ಶನ
ಗುಲ್ಬರ್ಗ: ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆ ಎದುರಿನ ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಮೈಸೂರಿನ ಕಲಾವಿದರಾದ ಎ. ಮನೋಹರ ಆಚಾರ ಹಾಗೂ ಕಲಾ ತಂಡದಿಂದ ಮೇ 23, 24 ಮತ್ತು 25 ಮೂರು ದಿನಗಳ ಕಾಲ ಸೈಕಲ್ ಸಾಹಸ ಪ್ರದರ್ಶನ ಹಾಗೂ ನೃತ್ಯ, ಹಾಸ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 7.30 ರಿಂದ9.30ರವರಗೆ ಸಾಹಸ ಪ್ರದರ್ಶನ ನಡೆಯಲಿದೆ ಎಂದು ವಿದ್ಯಾನಗರ ಕಾಲೋನಿ ವೆಲ್ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಮನವಿ ಮಾಡಿದ್ದಾರೆ.
26ಕ್ಕೆ ಸಗರನಾಡು ನೌಕರರ ಸಭೆ
ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ಮೇ 26ರಂದು ಬೆಳಗ್ಗೆ 10 ಗಂಟೆಗೆ ಸಗರ ನಾಡು ನೌಕರರ ಸಭೆ ಕರೆಯಲಾಗಿದೆ. ಸಗರ ನಾಡು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ವಾಸುದೇವ ಸೇಡಂ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಕರೆಯಲಾಗಿದ್ದು, ವಿಠ್ಠಲ ಜಾಧವ, ಬಿ. ಪಿ. ಹೂಗಾರ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಸಿ. ನೀರಡ್ಗಿ ಪ್ರಕಟಣೆ ಮೂಲಕ ಕೋರಿದ್ದಾರೆ.