ಇಂದು ಸಚಿವ ಬಾಬೂರಾವ್ ಚಿಂಚನಸೂರ್ಗೆ ಪೌರ ಸನ್ಮಾನ
ಗುರುಮಠಕಲ್: ವಿಧಾನ ಸಭೆ ಚುನಾವಣೆಯಲ್ಲಿ ಎರಡನೇ ಬಾರಿ ಗೆಲುವು ಸಾಧಿಸಿ, ಸಿದ್ದರಾಮಯ್ಯ ಸಂಪುಟದಲ್ಲಿ ಜವಳಿ, ಕ್ರೀಡೆ, ಒಳಸಾರಿಗೆ ಸಚಿವರಾದ ನಂತರ ಇದೇ ಪ್ರಥಮ ಬಾರಿಗೆ ಗುರುಮಠಕಲ್ಗೆ ಆಗಮಿಸುತ್ತಲಿರುವ ಸಚಿವ ಬಾಬೂರಾವ ಚಿಂಚನಸೂರ್ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲು ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಕಮಿಟಿ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಗುರುಮಠಕಲ್ ಪಟ್ಟಣಕ್ಕೆ ಬರುವ ಸಚಿವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ನಂತರ ಸನ್ಮಾನ ಸಭೆಯಲ್ಲಿ ಸತ್ಕರಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ ಕಮಿಟಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.