ಈಡಿಗ ಜನಾಂಗಕ್ಕೆ ಅನ್ಯಾಯ; ಈಡಿಗ ಯುವ ವೇದಿಕೆ ಕಿಡಿ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಶಾಸಕ ಮಾಲಿಕಯ್ಯ ಗುತ್ತೇದಾರ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ್ ತಾಲೂಕಿನ ಕಾಗೂಡ ತಿಮ್ಮಪ್ಪನವರಿಗೆ ಸಚಿವ ಸ್ಥಾನ ನೀಡದೆ ಈಡಿಗ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಆರ್ಯ ಈಡಿಗ ಯುವ ವೇದಿಕೆ ಆರೋಪಿಸಿದೆ.ಈಡಿಗ ಸಮಾಜದವರು ಕಾಂಗ್ರೆಸ್ಗೆ ಬೆಂಬಲಿಸಿ ಮತ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದೆ. ಆದರೆ,ಕಾಂಗ್ರೆಸ್ ಮುಖಂಡರು ದೆಹಲಿ ಮತ್ತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡಿಗ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದೆ.
ಸಚಿವ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಮುಂದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಈಡಿಗ ಜನಾಂಗದ ಇಬ್ಬರೂ ನಾಯಕರಿಗೆ ಕಾಂಗ್ರೆಸ್ನಲ್ಲಿ ಸೂಕ್ತ ಸಚಿವ ಸ್ಥಾನ ನೀಡಿ ಗೌರವಿಸಿ ಸ್ಥಾನಮಾನ ನೀಡಿದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶಿವಯ್ಯ ಗುತ್ತೇದಾರ, ನಾಗಯ್ಯ ಗುತ್ತೇದಾರ, ವಿನಯ ರಾವೂರ, ರೂಪೇಶ ಪಾಟೀಲ್, ಸಂಜೀವಕುಮಾರ ಮತ್ತಿತರರು ಉಪಸ್ಥಿತರಿದ್ದರು.