ಪಡಿತರಕ್ಕಾಗಿ ಜೈಕರವೇ ಪ್ರತಿಭಟನೆ
ಗುಲ್ಬರ್ಗ: ಜಿಲ್ಲೆಯ ನಗರಗಳಲ್ಲಿ ಮತ್ತು ಮಹಾನಗರ ಪಾಲಿಕೆಯ ಹಿಂದೆ ಇರುವ ಕೇಂದ್ರಗಳಲ್ಲಿ ಪಡಿತರ ಚೀಟಿ ಹಂಚುವ ವ್ಯವಸ್ಥೆ ಸರಿಪಡಿಸಬೇಕೆಂದು ಒತ್ತಾಯಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುಲ್ಬರ್ಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎದುರು ಪ್ರತಿಭಟನೆ ನಡೆಸಿದರು. ಪಡಿತರ ಚೀಟಿ ಹಂಚುವ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪಡಿತರ ಚೀಟಿಗಾಗಿ ಸಾಲುಗಟ್ಟಿ ನಿಂತಿರುವ ನಾಗರಿಕರಿಗೆ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಏನಾದರೂ ಒಂದು ನೆಪ ಹೇಳುತ್ತ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.ಬೇಸಿಗೆಯಲ್ಲಿ ಯಾವುದೇ ನೆರಳಿನ ವ್ಯವಸ್ಥೆ ಇಲ್ಲದೆ ಮಹಿಳೆಯರು, ವೃದ್ಧರು ಸುಮಾರು 8 ಗಂಟೆಗಳ ಕಾಲ ಸಾಲುಗಟ್ಟಿ ನಿಲ್ಲಬೇಕಾಗಿದೆ. ಒಂದು ವಾರದೊಳಗೆ ವ್ಯವಸ್ಥೆ ಸರಿಪಡಿಸದಿದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಚಿನ ಎಸ್. ಫರಹತಾಬಾದ್, ಮಂಜುನಾಥ ಹಾಗರಗಿ, ಜಗನ್ನಾಥ ಪಟ್ಟಣಶೆಟ್ಟಿ, ಕಾಶಿನಾಥ ಮಾಳಗೆ, ಜಯಸಿಂಗ್, ಚಂದ್ರು ಪಾಟೀಲ್, ಚನ್ನು ಮರಬ್, ಸಂದೇಶ ಪವಾರ, ಸತೀಶ ಫರಹತಾಬಾದ್, ಶರೀಪ್ ಕಾಳೆ, ರಾಜು, ಬಾಲರಾಜ, ಶ್ರೀಕಾಂತ ಜಾಧವ ಇತರರು ಭಾಗವಹಿಸಿದ್ದರು.