ರಾಷ್ಟ್ರೀಯ ಸಮ್ಮೇಳನ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗವು ಮೇ 24 ಮತ್ತು 25 ರಂದು ಎರಡು ದಿನಗಳ ಕಾಲ ಸಮಾಜದ ಸಮ್ಮಿಲಿತ ಬೆಳವಣಿಗೆಯಲ್ಲಿ ಸಾಂಘೀಕ ಸಮಾಜದ ಹೊಣೆಗಾರಿಕೆ ಪಾತ್ರ ಎಂಬ ವಿಷಯ ಮೇಲೆ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲು ನಿರ್ಧರಿಸಿದೆ.
ಈ ಸಮ್ಮೇಳನವು ರಾಷ್ಟ್ರೀಯ ಸಾಮಾಜಿಕ ವಿಜ್ಞಾನ ಸಂಶೋಧನ ಪರಿಷತ್ತು ನವದೆಹಲಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಂಘೀಕ ಸಮಾಜದ ಹೊಣೆಗಾರಿಕೆಯ ವಿವಿಧ ಆಯಾಮಗಳ ಕುರಿತು ಕೈಗಾರಿಕ ಮತ್ತು ಶೈಕ್ಷಣಿಕ ಕ್ಷೇತ್ರದಿಂದ ವಿವಿಧ ಪ್ರತಿಭಾನ್ವಿತ ವ್ಯಕ್ತಿಗಳು ಭಾಗವಹಿಸಲಿದ್ದು, ಸಾಮಾಜಿಕ ಹೊಣೆಗಾರಿಕೆಯ ಕುರಿತು ವಿಶೇಷ ಲೇಖನಗಳನ್ನು ಮಂಡಿಸಲಿದ್ದಾರೆ. ಈ ಸಮ್ಮೇಳನವು ಮುಂಬರುವ ದಿನಗಳಲ್ಲಿ ಉದ್ಯಮ ಕ್ಷೇತ್ರದ ಹೊಣೆಗಾರಿಕೆಗಳ ರೂಪರೇಷಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಮೈಲುಗಲ್ಲಾಗಲಿದೆ. ಈ ಸಮ್ಮೇಳನವು ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಪಟ್ಟ ವಿವಿಧ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಿದೆ ಎಂದು ಸಮ್ಮೇಳನದ ಅಧ್ಯಕ್ಷ ಡಾ. ಬಿ. ವಿಜಯ, ಡಾ. ರಾಜನಾಳ್ಕರ್ ಲಕ್ಷ್ಮಣ ತಿಳಿಸಿದ್ದಾರೆ.