ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಆಧಾರ್'ಗಾಗಿ ನೂಕುನುಗ್ಗಲು

Rashmi Kasaragodu
Updated On : 24 May 2013, 11:49 am

ಗುಲ್ಬರ್ಗ/ಶಹಾಬಾದ್: ನಾಲವಾರ ಗ್ರಾಮದಲ್ಲಿ 'ಆಧಾರ್' ನೋಂದಣಿ ಕಾರ್ಯ ಕಳೆದ ಐದು ದಿನಗಳಿಂದ ಪ್ರಾರಂಭವಾಗಿದ್ದು, ನೋಂದಣಿ ಅರ್ಜಿಗಾಗಿ ಸಾರ್ವಜನಿಕರು ಮುಗಿದು ಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿದೆ.
ಗ್ರಾಪಂ.ನಲ್ಲಿ ಒಂದು ಗಣಕಯಂತ್ರ ಕೇವಲ 40 ಜನರ ಹೆಸರನ್ನು ನೋಂದಣಿ ಮಾಡಿಕೊಳ್ಳುತ್ತಿದ್ದು, ಒಟ್ಟು ಮೂರು ಗಣಕಯಂತ್ರಗಳಿಂದ 120 ಜನರ ಹೆಸರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಬೆಳಗ್ಗೆ 8.30ರಿಂದ ಸಂಜೆ 9.30ರವರೆಗೆ 120 ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ರೈತ ಕಾರ್ಮಿಕರು ಹೆಚ್ಚಿರುವ ಇಲ್ಲಿ ಅರ್ಜಿ ಫಾರಂ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ ಉಂಟಾಗುತ್ತಿರುವ ನೂಕುನುಗ್ಗಲನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement