ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅನುದಾನವಿದ್ದರೂ ಕಾಮಗಾರಿ ನೆನಗುದಿಗೆ

Lingaraj Badiger
Updated On : 25 May 2013, 11:20 am

ಶಹಾಪುರ: ಭೂಸೇನಾ ನಿಗಮ(ಲ್ಯಾಂಡ್ ಆರ್ಮಿ) ಇನ್ಮೇಲೆ ಮೀಟಿಂಗ್ಗೆ ನೀವ್ಯಾರು ಬರುವ ಅವಶ್ಯಕತೆಯಿಲ್ಲ. ಏನಾದರೊಂದು ನೆಪ ಹೇಳುತ್ತಾ ಎಲ್ಲೆಂದರಲ್ಲೆ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿ ಸರ್ಕಾರದ ಯೋಜನೆ ಹಾಳು ಮಾಡಿದ್ದು, ನಿಮ್ಮ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಇಡೀ ತಾಪಂ ಸದಸ್ಯರು ಅಸಮಾಧಾನಗೊಂಡು ಇಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಶಹಾಪುರ ತಾಲೂಕು ಪಂಚಾಯತಿ 12ನೇ ಸಾಮಾನ್ಯ ಸಭೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಚರ್ಚೆ ನಡೆದಾಗ ಕಳೆದ ಮೂರು ವರ್ಷದಿಂದ ತಾಲೂಕಿನ ಚಾಮನಾಳ ಗ್ರಾಮದಲ್ಲಿ ಕೆಜೆಜಿ (ಕಸ್ತೂರಿಬಾಗಾಂಧೀ) ವಸತಿ ಶಾಲೆ ಕಾಮಗಾರಿ ನಡೆದು ನೆನೆಗುದಿಗೆ ಬಿದ್ದಿದ್ದು ಭೂಸೇನಾ ನಿಗಮದವರು ಕಾಮಗಾರಿ ನಿರ್ವಹಿಸದೆ ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ.  ಅನುದಾನದ ಅವಕಾಶವಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಯೋಜನೆ ವಿಫಲ. ಶಿಕ್ಷಣ ಇಲಾಖೆಗೆ ಇದರಿಂದ ಮುಜುಗರವಾಗಿದೆ ಎಂದು ಸದಸ್ಯ ಚಂದಪ್ಪ ಸೀತನಿ ಸಂಬಂಧಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ರಸ್ತಾಪುರ, ಖಾನಾಪುರ, ಮದ್ರಿಕಿ, ಗುಂಡಗುರ್ತ ಗ್ರಾಮದಲ್ಲಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಈ ರೀತಿ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ತಾಪಂ ಕಾರ್ಯ ನಿರ್ವಹಣಾ ಅಧಿಕಾರಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದವರಿಗೆ ನೋಟಿಸ್ ನೀಡಿ ಮೇಲಾಧಿಕಾರಿಗೆ ವರದಿ ಸಲ್ಲಿಸಿರಿ ಎಂದು ಸರ್ವ ಸದಸ್ಯರು ತಿಳಿಸಿದರು.
ಶಿಕ್ಷಣ ಇಲಾಖೆ: ಇದೇ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳು ಪುಸ್ತಕ 2013-14 ನೇ ಸಾಲಿಗಾಗಿ ಇಲಾಖೆ ಹಾಕಿಕೊಂಡಿರುವ ಕಾರ್ಯಯೋಜನೆ ಕುರಿತು ಮಾತನಾಡಿ, ಆರ್ಟಿಇ ಕಾಯ್ದೆಯಡಿ 446 ವಿದ್ಯಾರ್ಥಿಗಳಿಂದ ದಾಖಲಾತಿಗಾಗಿ ಅರ್ಜಿಬಂದಿವೆ. ಪ್ರತಿಶತ 75 ರಷ್ಟು ಪಠ್ಯಪುಸ್ತಕ, 5 ಮತ್ತು 8ನೇ ತರಗತಿಗೆ ವಿಶೇಷ ಚಟುವಟಿಕೆಯ ಪಠ್ಯಪುಸ್ತಕ ಬಂದಿವೆ, ದೈಹಿಕ ಶಿಕ್ಷಣಕ್ಕಾಗಿ ಕಡ್ಡಾಯ ಪುಸ್ತಕಗಳು ಬಂದಿವೆ. 2012-13ನೇ ಸಾಲಿನಲ್ಲಿ ಪ್ರತಿಶತ 85ರಷ್ಟು ಎಸ್ಎಸ್ಎಲ್ಸಿ ಫಲಿತಾಂಶ ಬಂದಿದ್ದು, ಯಾದಗಿರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಸದ್ಯ ತಾಲೂಕಿಗೆ 445 ಶಿಕ್ಷಕರ ಹುದ್ದೆ ಖಾಲಿ ಇದೆ. ಮುಂದಿನ ದಿನಗಳಲ್ಲಿ ಶಿಕ್ಷಕರ ವರ್ಗವಣೆ ಪ್ರಕ್ರಿಯೆ ಪ್ರಾರಂಭವಾದರೆ ಸಮಸ್ಯೆ ಇನ್ನಷ್ಟು ಜಟಿಲವಾಗಬಹುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಮಡಿಲ ಕಿಟ್ ಕೊಡುವಲ್ಲಿ ವಿಳಂಬನೀತಿ: ಹೆರಿಗೆಯಾಗುವ ಹಂತದಲ್ಲಿ ಮಡಿಲ ಕಿಟ್ ಕೊಡುವುದು ತಾಯಿ ಮಗುವಿನ ಅನುಕೂಲ ಆದರೆ ಆರೋಗ್ಯ ಇಲಾಖೆಯಲ್ಲಿ ಕೆಲಸಕ್ಕೆ ಬಾರದ ನಿಯಮ ಅಳವಡಿಸಿ ಸರಿಯಾದ ವೇಳೆಗೆ ಕಿಟ್ ಕೊಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಗುಲಸರಂ ಪಂಚಾಯತಿ ಸದಸ್ಯ ಶರಣಭೂಪಾಲರಡ್ಡಿ ವೈದ್ಯರ ಬೇಜವಾಬ್ದಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.  ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಯಾದಾಗ ತಕ್ಷಣ ಕಿಟ್ ನೀಡಿರಿ ಎಂದು ಆರೋಗ್ಯ ಅಧಿಕಾರಿಗೆ ತಿಳಿಸಿದರು. ಮೂಡಬೂಳ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣ ಹೆಚ್ಚಾಗಿದ್ದು, ಪಿಎಚ್ಸಿ ಕೇಂದ್ರಗಳಲ್ಲಿ ವೈದ್ಯರಿದ್ದು, ಆರೈಕೆ ಮಾಡಬೇಕೆಂದು ತಾಪಂ ಸದಸ್ಯ ಯಮನಪ್ಪ ಚಿಗರಿ ಸಾರ್ವಜನಿಕರ ಆರೋಗ್ಯ ಬಿಗಡಾಯಿಸಿದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು.
ಗೊಬ್ಬರ ಸಿಗಲಾರದಂಥ ಪರಿಸ್ಥಿತಿ ಬೇಡ: ಮುಂಗಾರು ಬಿತ್ತನೆ ಚಟುವಟಿಕೆ ಪ್ರಾರಂಭವಾದ ದಿನಗಳಲ್ಲಿ ರೈತರು ಗಂಟೆಗಟ್ಟಲೇ ಗೊಬ್ಬರ ಕೇಂದ್ರ ಸೊಸೈಟಿಗಳ ಮುಂದೆ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣ ಮಾಡಬೇಡಿ. ಕಳಪೆಬೀಜ, ಆಕ್ರಮ ಗೊಬ್ಬರ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಕೃಷಿ ಇಲಾಖೆ ಜಾಗೃತವಾಗಬೇಕು ಎಂದು ತಾಪಂ ಸದಸ್ಯ ಶಿವನಗೌಡ ಮದ್ರಿಕಿ ಕೃಷಿ ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸುತ್ತ. ರೈತರಿಗೆ ನಕಲಿ ಬೀಜದ ಹಾವಳಿಯಿಂದ ತಪ್ಪಿಸಲು ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಕರಪತ್ರ ಹಂಚಬೇಕು. ನಕಲಿ ಬೀಜ ಮಾರುವವರಿಗೆ ಭಯ ಹುಟ್ಟಬೇಕು. ಈ ಕುರಿತು ಗಮನ ನೀಡಬೇಕು ಎಂದಾಗ ಅಧಿಕಾರಿಗಳು ವಿವರನೀಡಿ ಗೊಬ್ಬರ ಈಗಾಗಲೇ ದಾಸ್ತಾನು ಇದ್ದು ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಅಕ್ಷರ ದಾಸೋಹ: ಅಕ್ಷರ ದಾಸೋಹದಡಿ ಪ್ರಾಥಮಿಕ ಪ್ರೌಢಶಾಲೆಗೆ ಸಂಬಂಧಿಸಿದಂತೆ 47609 ಫಲಾನುಭವಿಗಳು ಉಪಯೋಗ ಪಡಿಯುತ್ತಿದ್ದು, ಕೆಲವು ಕಡೆ ಹಿ.ಪ್ರಾ.ಶಾಲೆಗಳಿಗೆ ಟ್ಯಾಗ್ ಮಾಡಲಾಗಿದೆ ಎಂದು ತಿಳಿಸಿದರು.
ಪಶುಸಂಗೋಪನಾ ಇಲಾಖೆ: ಪಶುಸಂಗೋಪನಾ ಇಲಾಖೆಯವರು ಮೇವು ಸಂಗ್ರಹಣೆ ಬಗ್ಗೆ ಜಾನುವಾರಗಳಿಗೆ ಮಾರಕ ರೋಗಗಳು ಬಾರದಂತೆ ಅನುಸರಿಸಬೇಕಾದ ನಿಯಮಗಳು, ರೋಗನಿರೋಧಕ ಚಿಕಿತ್ಸೆ ನೀಡಿದ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ, ಕೈಗಾರಿಕೆ, ರೇಷ್ಮೆ ಇಲಾಖೆ, ಸಮಾಜಕಲ್ಯಾಣ ಸೇರಿದಂತೆ ಹಲವು ಇಲಾಖೆಗಳು ಮಾಹಿತಿ ನೀಡಿದರು.    ತಾಪಂ ಉಪಾಧ್ಯಕ್ಷ ಶರಣಪ್ಪ ದೇಸಾಯಿ ಇಓ, ನರಸಿಂಗರಾವ ಮುತಾಲಿಕ್, ನಿಂಗಣ್ಣಗೌಡ ಹೈಯಾಳ ಸೇರಿದಂತೆ ಮಹಿಳಾ ತಾಪಂ ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement