ಕಾಂಗ್ರೆಸ್ ಕಿಸಾನ್ ಘಟಕಕ್ಕೆ ಅಯಾಜ್ ನೇಮಕ
ಬೀದರ್: ಕಾಂಗ್ರೆಸ್ ಕಿಸಾನ್ ಖೇತ ಮಜದೂರ ಘಟಕದ ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮಹ್ಮದ ಅಯಾಜ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮಜದೂರ ಘಟಕದ ರಾಜ್ಯ ಕಾರ್ಯದರ್ಶಿ ಪ್ರಕಾಶ ಘಾಳೆ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿದ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್.ಎಸ್. ಸರ್ಜಿವಾಲ್ ಆದೇಶದ ಮೇರೆಗೆ ನೇಮಕ ಮಾಡಲಾಗಿದ್ದು, ಕೂಡಲೇ ಕಾರ್ಯಭಾರ ವಹಿಸಿಕೊಂಡು ಕಿಸಾನ್ ಮತ್ತು ಖೇತ ಮಜದೂರ ಸಂಘಟನೆಯನ್ನು ಸಂಘಟಿಸಬೇಕೆಂದು ತಿಳಿಸಿದ್ದಾರೆ.
ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ
ಬೀದರ್: ಕೃಷಿ ವಿಶ್ವವಿದ್ಯಾಲಯ ರಾಯಚೂರು ಅವರು 2013-14ನೇ ಸಾಲಿಗಾಗಿ 2 ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್ನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದಾರೆ. ಕೃಷಿ ಡಿಪ್ಲೋಮಾಗೆ ಅರ್ಹತೆ ಪಡೆಯಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ಅರ್ಜಿ ನಮೂನೆ ಮತ್ತು ವಿವರಣಾ ಪತ್ರಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ ಢಿಢಿಢಿ.್ಡಛಡ್ಠಝ್ಝ್ಛ್ಡ್ಠ.ಜಜ್ಡ.್ಝಟಿ ದಲ್ಲಿ ಮಾತ್ರ ಪಡೆಯಬಹುದು. ಅರ್ಜಿ ನಮೂನೆಗಳು ವಿಶ್ವವಿದ್ಯಾಲಯದ ಇತರ ಯಾವುದೇ ಸಂಸ್ಥೆಗಳಲ್ಲಿ ಲಭ್ಯವಿರುವುದಿಲ್ಲ.
ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 24 ರಂದು ಸಾಯಂಕಾಲ 5 ಗಂಟೆ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಬೀದರ್ನ ಮುಖ್ಯಸ್ಥರನ್ನು ದೂರವಾಣಿ ಸಂಖ್ಯೆ 08482-244155 ಗೆ ಸಂಪರ್ಕಿಸಬಹುದು. ಎಂದು ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರು ತಿಳಿಸಿದ್ದಾರೆ.