'ಬೇಸಿಗೆ ಶಿಬಿರಗಳು ಉಪಯೋಗಕಾರಿ'
ಯಾದಗಿರಿ: ಮಕ್ಕಳ ವ್ಯಕ್ತಿತ್ವವನ್ನು ಅರಳಿಸಿ ಭವಿಷ್ಯದ ನಾಯಕರನ್ನಾಗಿ ಸಜ್ಜುಗೊಳಿಸಲು ಉತ್ತಮವಾದ ಸಂಸ್ಕಾರ ಮತ್ತು ಸೇವಾ ಮನೋಭಾವನೆ ತುಂಬಲು ಬೇಸಿಗೆ ಶಿಬಿರಗಳು ವರದಾನವಾಗಿದೆ ಎಂದು ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ರೆಕ್ಟರ್. ಫಾ ಸಜ್ಜಿ ಜಾಜರ್ ಹೇಳಿದರು. ಶುಕ್ರವಾರ ನಗರದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ 5 ದಿನಗಳ ಬೆಳಗುವ ದೀಪಗಳು ಸೀಸನ್-2 ಎಂಬ ಬೇಸಿಗೆ ಶಿಬಿರ ಮುಕ್ತಾಯ ಸಮಾರೋಪದಲ್ಲಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಸ್ಥೆ ನಿರ್ದೇಶನ ರೆಜಿ ಜಾಕೊಬ್, ಸಿಸ್ಟರ್ ಮರಿಯಾ ಕುಜೂರು, ಸಂಯೋಜಕ ಸಿ. ಶರಣಪ್ಪ ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ಪ್ರದರ್ಶಿಸಿದರು. ಶರಬಯ್ಯ ಕಲಾಲ ನಿರೂಪಿಸಿದರು. ಯಾದಗಿರಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಶಾಲೆಯಿಂದ ಹೊರಗುಳಿದ 160 ಮಕ್ಕಳು ಭಾಗಿಯಾಗಿದ್ದರು.