27ರಿಂದ 'ಲೋಕಾ' ಅಹವಾಲು ಸ್ವೀಕಾರ
ಗುಲ್ಬರ್ಗ: ಗುಲ್ಬರ್ಗ ವಿಭಾಗದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಮೇ 27ರಿಂದ 31ರವರೆಗೆ ಭೇಟಿ ನೀಡಿ ಬೆಳಗಿನ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಿ, ಅವರ ಅಹವಾಲುಗಳನ್ನು ಆಲಿಸಲಿದ್ದಾರೆ.
ಕುಂದು ಕೊರತೆಗಳ ಮತ್ತು ದೂರಿನ ಬಗ್ಗೆ ಅರ್ಜಿಗಳನ್ನು ಸಾರ್ವಜನಿಕರು ಸ್ಥಳದಲ್ಲಿಯೇ ನೀಡಿ ಸದುಪಯೋಗ ಪಡೆಯಲು ಕೋರಲಾಗಿದೆ. ಅಲ್ಲದೆ ದೂರು ಸಲ್ಲಿಸಲು ಬೇಕಾಗುವ ಅರ್ಜಿ ನಮೂನೆ ಪತ್ರ ಸಂ.1 ಮತ್ತು 2ನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ.
ಅಹವಾಲು ಸ್ವೀಕರಿಸುವ ಅಧಿಕಾರಿಗಳ ಹೆಸರು ಹಾಗೂ ಹುದ್ದೆ, ಭೇಟಿ ನೀಡುವ ಸ್ಥಳ ಮತ್ತು ದಿನಾಂಕ ಹಾಗೂ ಅಹವಾಲು ಸ್ವೀಕರಿಸುವ ಸ್ಥಳ ಇಂತಿದೆ.
ಲೋಕಾಯುಕ್ತ ಪಿಐ- ತಮ್ಮರಾಯ ಪಾಟೀಲ್, ಆಳಂದ, ಮೇ 28ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಆಳಂದ ಹಾಗೂ ಚಿತ್ತಾಪುರ, ಮೇ 29 ಲೋಕೋಪಯೋಗಿ ಪ್ರವಾಸಿ ಮಂದಿರ ಚಿತ್ತಾಪುರ
ಲೋಕಾಯುಕ್ತ ಡಿವೈಎಸ್ಪಿ ರವಿಕುಮಾರ ಎನ್. ಪಾಟೀಲ್ ಚಿಂಚೋಳಿ ಮೇ 27 ಚಿಂಚೋಳಿ ಲೋಕೋಪಯೋಗಿ ಪ್ರವಾಸಿ ಮಂದಿರ ಹಾಗೂ ಸೇಡಂ ಮೇ 29 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಸೇಡಂ.
ಲೋಕಾಯುಕ್ತ ಪಿ.ಐ. ಜೇಮ್ಸ್ ಲಾಯ್ ಕ್ಸೇವಿಯರ್ ಮಿನೇಜೆಸ್, ಅಫಜಲ್ಪುರ ಮೇ 28 ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಅಫಜಲ್ಪುರ ಹಾಗೂ ಜೇವರ್ಗಿ ಮೇ 31ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಜೇವರ್ಗಿ.
ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು ಲೋಕಾಯುಕ್ತ ಆರಕ್ಷಕ ಅಧೀಕ್ಷಕರ ಕಚೇರಿ, ಐವಾನ್-ಇ-ಶಾಹಿ ಕಂಪೌಂಡ್ ಗುಲ್ಬರ್ಗ-585102, ದೂರವಾಣಿ ಸಂಖ್ಯೆ 08472-263645-263684ಗಳನ್ನು ಸಂಪರ್ಕಿಸಬಹುದು.