'ಕಾರ್ಮಿಕರು ಸೌಲಭ್ಯ ಪಡೆಯಿರಿ'
ಕ.ಪ್ರ. ವಾರ್ತೆ , ಯಾದಗಿರಿ , ಮೇ 25
ಸಂಘದ ಸೌಲಭ್ಯಗಳನ್ನು ಎಲ್ಲಾ ಕಾರ್ಮಿಕರು ಸರಿಯಾದ ರೀತಿಯಲ್ಲಿ ಇದರ ಯೋಜನೆಗಳು, ಲಾಭಗಳನ್ನು ಪಡೆದುಕೊಳ್ಳಬೇಕೆಂದು ಎಂದು ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ರಾಷ್ಟ್ರೀಯ ಕಾರ್ಯದರ್ಶಿ ಶಿವಣ್ಣ ಹೇಳಿದರು.
ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಚರ್ಚ್‌ನಲ್ಲಿ ಆಯೋಜಿಸಿದ್ದ ಕಾಮರ್‌ಕರ ದಿನಾಚರಣೆಯಲ್ಲಿ ಭಗತ್‌ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಸೌಲಭ್ಯ ಪಡೆಯಿರಿ: ಕಾರ್ಮಿಕ ಮಂಡಳಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆಯ ಮಗಳ ಮದುವೆಗೆ, ವೃತ್ತಿಪರ ಶಿಕ್ಷಣಕ್ಕೆ, ಕಾರ್ಮಿಕ ಕೆಲಸ ಮಾಡುವಾಗ ಅಪಘಾತಕ್ಕಿಡಾದಾಗ ಯಾವ ರೀತಿಯಾಗಿ ಕಾರ್ಮಿಕ ಮಂಡಳಿಯಿಂದ ಸಿಗುವ ಸೌಲಭ್ಯಗಳನ್ನು ಜಿಲ್ಲಾ ಅಧ್ಯಕ್ಷರ ಮೂಲಕ ಪಡೆದುಕೊಂಡು ಉತ್ತಮ ಜೀವನವನ್ನು ನಡೆಸುವಂತೆ ಹೇಳಿದರು.
ಕಾರ್ಮಿಕ ಸಂಘವು 1920ರ ಅಕ್ಟೋಬರ್ 31ರಂದು ಪಂಜಾಬಿನ ಸಿಂಹ ಎಂದು ಹೆಸರಾಗಿರುವಂತ ಲಾಲಾ ಲಜಪತ್‌ರಾಯ್ ಆರಂಭಿಸಿದರು. ಈ ಸಂಘವು ದೇಶಾದ್ಯಂತ ಹೆಸರುವಾಸಿಯಾಗಿದ್ದು, ಇಲ್ಲಿಯವರೆಗೂ ಮಾಡಿರುವ ಸಾಧನೆಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖಗೌಡ ಮಾಗನೂರ, ಕಾರ್ಮಿಕರ ಇಲಾಖೆಯಲ್ಲಿ ಬರತಕ್ಕಂತ ಎಲ್ಲಾ ಸೌಲಭ್ಯಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಸಮಯಕ್ಕೆ ದೊರಕಿಸಿಕೊಡುವಲ್ಲಿ ನಾನೂ ಕೂಡ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ.
ಎಲ್ಲಾ ಕಾರ್ಮಿಕರ ಮನೆಯಲ್ಲಿ ಪ್ರತಿಯೊಂದು ಮಗು ವಿದ್ಯಾವಂತನಾದಲ್ಲಿ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕ ಚೆನ್ನರಾಡ್ಡಿ ಚವ್ಹಾಣ ಮಾತನಾಡಿ, ಪ್ರತಿ ತಿಂಗಳಿಗೆ ಒಬ್ಬರು ಐದು ಜನರನ್ನು ಸಂಘದ ಸದಸ್ಯರನ್ನು ಮಾಡಿಸಿದಾಗಿ ಯಾದಗಿರಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಎಷ್ಟಿದ್ದಾರೆ ಎಂದು ತಿಳಿಯುತ್ತದೆ. ಕಾರ್ಮಿಕರ ಸಂಘಕ್ಕೆ ಸದಸ್ಯರಾಗಬಯಸುವರು ಯಾವ ದಾಖಲೆಗಳನ್ನು ಸಂಘಕ್ಕೆ ಸಲ್ಲಿಸಬೇಕೆಂದು ತಿಳಿಸಿದರು.
ಗುಂಡಪ್ಪ ಜಮಖಂಡಿ ಮಾತನಾಡಿ, ಕಾರ್ಮಿಕರು ಅಭಿವೃದ್ಧಿ ಮಂಡಳಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಪ್ರತಿವರ್ಷ ನವೀಕರಣಕಡ್ಡಾಯವಾಗಿ ಮಾಡಿದರೆ ಯೋಜನೆಗಳು ದೊರೆಯುತ್ತವೆ ಎಂದು ತಿಳಿಸಿದರು.