ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ

Vishwanath S
Updated On : 26 May 2013, 2:16 am

ಕನ್ನಡಪ್ರಭ ವಾರ್ತೆ ,  ಚಿಂಚೋಳಿ ,  ಮೇ 25
ತಾಲೂಕಿನ ಗಡಿಭಾಗದಲ್ಲಿರುವ ಸಣ್ಣ ನೀರಾವರಿ ಕೆರೆಗಳನ್ನು ಪುನಶ್ಚೇತನಗೊಳಿಸಿ ರೈತರಿಗೆ ನೀರಾವರಿ ಸೌಲಭ್ಯ ಮತ್ತು ಜನರಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ಶಾಸಕ ಡಾ. ಉಮೇಶ ಜಾಧವ ಭರವಸೆ ನೀಡಿದರು.
ತಾಲೂಕಿನ ಚಿಕ್ಕನಿಂಗದಳ್ಳಿ ಗ್ರಾಮದ ಸಣ್ಣ ನೀರಾವರಿ ಕೆರೆಗೆ ಶನಿವಾರ ಭೇಟಿ ನೀಡಿ ಕೆರೆಯ ದುಸ್ಥಿತಿಯ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆರೆ ಗೇಟಿನಿಂದ ನಿರಂತರವಾಗಿ ನೀರು ಸೋರಿಕೆಯಿಂದಾಗಿ ಕೆರೆಯಲ್ಲಿನ ನೀರು ಅನಾವಶ್ಯಕವಾಗಿ ಹರಿದು ಹೋಗುತ್ತಿವೆ. ಇದರಿಂದಾಗಿ  ಚಿಕ್ಕನಿಂಗದಳ್ಳಿ ಗ್ರಾಮ ಮತ್ತು ತಾಂಡಾಗಳ ರೈತರಿಗೆ ಸಣ್ಣ ನೀರಾವರಿ ಕೆರೆಯಿಂದ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮದ ಪ್ರಮುಖರು ಶಾಸಕರಿಗೆ ದೂರಿದರು.
ಜಮೀನಿಗೆ ನೀರಿಲ್ಲ: ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಗೇಟು ಒಡೆದು ಹೋಗಿವೆ, ಹೊಲಗಾಲುವೆಗಳಿಲ್ಲ, ಸಣ್ಣ ನೀರಾವರಿ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆ ಮತ್ತು ಸರ್ಕಾರದಿಂದ ಲಕ್ಷಾಂತರ ರು. ಖರ್ಚು ಮಾಡಿ ಕಳಪೆಮಟ್ಟದ ಕಾಮಗಾರಿ ನಡೆಸಿದರಿಂದ ಇಲ್ಲಿನ ರೈತರಿಗೆ ಯಾವುದೇ ಉಪಯೋಗವಾಗಿಲ್ಲ. ಕಾಲುವೆಗಳು ಹಾಳಾಗಿವೆ, ನೀರು ಜಮೀನುಗಳಿಗೆ ಹರಿದು ಬರುತ್ತಿಲ್ಲ ಇದರಿಂದ ರೈತರು ನೀರಾವರಿ ಸೌಲಭ್ಯಗಳಿಂದ ವಂಚಿತಗೊಳ್ಳಬೇಕಾಗಿದೆ. ತುಂಬಾ ಹಳೆಯದಾಗಿರುವ ಕೆರೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಗ್ರಾಮಸ್ಥರ ಪರವಾಗಿ ಬ್ರಿಜೇಶ್ ಪಾಟೀಲ್ ಶಾಸಕರ ಗಮನಕ್ಕೆ ತಂದರು.
ನೀರು ಸಂಗ್ರಹ: ಶಾಸಕ ಡಾ. ಉಮೇಶ ಜಾಧವ ಮಾತನಾಡಿ, ಚಿಕ್ಕನಿಂಗದಳ್ಳಿ ಸಣ್ಣ ನೀರಾವರಿ ಕೆರೆಯ ಬಗ್ಗೆ ಸಂಬಂಧಪಟ್ಟಿರುವ ಅಧಿಕಾರಿಗಳೊಂದಿಗೆ  ಚರ್ಚಿಸಿ ಇದರ ಬಗ್ಗೆ ತಾಂತ್ರಿಕವಾಗಿರುವ ವರದಿಯನ್ನು ಪರಿಶೀಲಿಸಿ ಈ ಕೆರೆ ಅಭಿವೃದ್ಧಿಪಡಿಸಿ ಜನರಿಗೆ ಮತ್ತು ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ಮತ್ತು ಹೂಳು ತೆಗೆದು ಹಾಕಿಸಿ ಅರಣ್ಯಪ್ರದೇಶದಿಂದ ಹರಿದು ಬರುವ ಹೆಚ್ಚಿನ ನೀರು ಸಂಗ್ರಹ ಮಾಡುವ ಪ್ರಯತ್ನ ಮಾಡಲಾಗುವುದು. ಕಳಪೆ ಮಟ್ಟದ ಕಾಮಗಾರಿ ಬಗ್ಗೆ ತನಿಖೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement