ಚೀನಾ ಮೂರನೇಸಮ್ಮೇಳನಕ್ಕೆ ಭಾಸ್ಕರನ್, ಓಕಳಿ
ಗುಲ್ಬರ್ಗ: ಭಾರತ ಜೀನಾ ಸ್ನೇಹ ಸಂಘ ಮತ್ತು ಚೀನಾ ದಕ್ಷಿಣ ಪೂರ್ವ ಏಷ್ಯಾ ದೇಶಗಳ ಸ್ನೇಹ ಸಂಘ ವೇದಿಕೆಯಡಿ ಚೀನಾದ ಕುನ್‌ಮಿಂಗ್ ಪ್ರಾಂತ್ಯದಲ್ಲಿ ಜೂನ್ 5ರಿಂದ 8ರವರೆಗೆ ನಡೆಯಲಿರುವ ಮೂರನೇ ಸಮ್ಮೇಳನದಲ್ಲಿ ಭಾರತದಿಂದ ಸೆಕ್ರೆಟರಿ ಜನರಲ್ ವಿ. ಭಾಸ್ಕರನ್ ಮತ್ತು ಗುಲ್ಬರ್ಗ ಜಿಲ್ಲೆಯ ಎಕ್ಸಿಕ್ಯೂಟಿವ್ ಮೆಂಬರ್ ಸಿ.ಬಿ. ಪಾಟೀಲ್ ಓಕಳಿ ಭಾಗವಸಲಿದ್ದಾರೆ.
ಶ್ರೀಲಂಕಾದಲ್ಲಿ 2010 ರಲ್ಲಿ ನಡೆದ ಸಂವಿಧಾನ ಸಭೆಯಲ್ಲಿ ಐದು ದಿನಗಳ ಕಾಲ ದಕ್ಷಿಣ ಪೂರ್ವ ಏಷ್ಯಾದ ಎಲ್ಲ ದೇಶಗಳ ಪ್ರತಿನಿಧಿಗಳೊಂದಿಗೆ ಸಿ.ಬಿ. ಪಾಟೀಲ್ ಓಕಳಿ ಕೂಡ ಭಾಗವಹಿಸಿದ್ದರು.
ಇಂದಿನ ಪರಿಸ್ಥಿತಿಯಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು, ಸರ್ವಾಧಿಕಾರಿ ಶಕ್ತಿಗಳು ದಕ್ಷಿಣಪೂರ್ವ ಏಷ್ಯಾ ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿ ಈ ದೇಶಗಳ ಆರ್ಥಿಕ ಪ್ರಗತಿಗೆ ದೊಡ್ಡ ಮಾರಕವಾಗಿವೆ.
ಇದನ್ನು ಹಿಮ್ಮೆಟ್ಟಿಸಲು ಜನಾಭಿಪ್ರಾಯ ಮೂಡಿಸುವುದು ಅವಶ್ಯಕವಾಗಿದೆ. 'ಪೀಪಲ್ ಟು ಪೀಪಲ್ ಪ್ರೆಂಡ್‌ಶಿಪ್' ಇದು ನಮ್ಮ ಸಂಘಟನೆಯ ಜವಾಬ್ದಾರಿ ಎಂದು ಓಕಳಿ ತಿಳಿಸಿದ್ದಾರೆ.