ಬುದ್ಧ, ಬಸವ ವಿಚಾರ ಸಂವಿಧಾನದಲ್ಲಿ ಅಳವಡಿಕೆ
ಗುಲ್ಬರ್ಗ/ಶಹಾಬಾದ್: ಬುದ್ಧ ಹಾಗೂ ಬಸವಣ್ಣನವರು ಸಮಾಜದಲ್ಲಿ ಪ್ರತಿಪಾದಿಸಿದ ತತ್ವ, ವಿಚಾರಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದು ಸೋಮಶೇಖರ ಅಪ್ಪಗೇರಿ ಅಭಿಪ್ರಾಯಪಟ್ಟರು.
ನಗರದ ಪೊಲೀಸ್ ಮೈದಾನದಲ್ಲಿ ಗುರುವಾರ ಬಸವಣ್ಣ ಮತ್ತು ಬಸವಾದಿ ಶರಣರ ಜಯಂತ್ಸುತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಬಸವಣ್ಣನವರ ಜಯಂತ್ಸುತ್ಸವದಲ್ಲಿ ಉಪನ್ಯಾಸಕಾರರಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ರಾವೂರನ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಕೆಳವರ್ಗದ, ತುಳಿತಕ್ಕೆ ಒಳಗಾದವರನ್ನು ತೆಗೆದುಕೊಂಡು ಕ್ರಾಂತಿ ಮಾಡಿದರು. ದಲಿತ ಜನಾಂಗಕ್ಕೆ 'ಅಯ್ಯಾ' ಎಂದು ಕರೆದು ಜಂಗಮ ಸ್ಥಾನ ಕೊಟ್ಟರು. ಇಂದು ಮಿಥ್ಯಾವಾದಿಗಳು ದಲಿತರನ್ನು ದೂರು ಇಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸಮುದಾಯ ಆರೋಗ್ಯಾಧಿಕಾರಿ ಡಾ. ಪಿ.ಎಂ. ಸಜ್ಜನ್ ಧ್ವಜಾರೋಹಣ ನೆರವೇರಿಸಿದರು. ಎಎಸ್‌ಐ ಚಂದ್ರಕಾಂತ ಉದ್ಘಾಟಿಸಿದರು. ಅತಿಥಿಗಳಾಗಿ ವಚನೋತ್ಸವ ಸಮಿತಿ ಅಧ್ಯಕ್ಷ ಚಂದ್ರಕಾಂತ ದಸ್ತಾಪುರ, ವೀರಶೈವ ಸಮಾಜದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ಭೀಮರಾಯ ಮುದ್ನಾಳ, ವಿಶ್ವನಾಥ ಬಿರಾಳ, ಶರಣಪ್ಪ ಕೊಡದೂರ, ನಿಂಗಣ್ಣ ಪೂಜಾರಿ ಸಾಯಬಣ್ಣ ಬೆಳಗುಂಪಿ, ದುರ್ಗಪ್ಪ ಪವಾರ, ಶ್ಯಾಮ್ ದಂಡಗುಲಕರ್, ಸುರೇಶ ಅಬಕಾರಿ, ಮಲ್ಲೇಶಪ್ಪ ಮಡಿವಾಳ, ಡಾ. ಅಶೋಕ ಜಿಂಗಾಡೆ ಸೇರಿದಂತೆ ಇದ್ದರು.
ಒಕ್ಕೂಟದ ಪದಾಧಿಕಾರಿಗಳಾದ ಗಿರಿಮಲ್ಲಪ್ಪ ವಳಸಂಗ, ವೈಜನಾಥ ಹುಗ್ಗಿ, ಸೂರ್ಯಕಾಂತ ಕೋಬಾಳ, ಬಸವಣ್ಣಪ್ಪ ವಾಲಿ, ಅನೀಲಕುಮಾರ ಸಲಕರ್, ಶರಣಗೌಡ ಪಾಟೀಲ್, ಮಹಾಂತೇಶ ಅವಂಟಿ, ಶರಣು ಡೆಂಗಿ, ಪ್ರಕಾಶ ವಳಸಂಗ ಇತರರು ಇದ್ದರು. ಭೀಮರಾವ ಸಾಳುಂದೆ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಟೆಂಗಳಿ ಸ್ವಾಗತಿಸಿದರು. ಸಂಜಯ ಮಾಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಥೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಹಡಪದ ವಂದಿಸಿದರು.