'ಅಭಿವೃದ್ಧಿಗಾಗಿ ಸದಾ ಹೋರಾಡುವೆ'
ಸೇಡಂ: ಅಭಿವೃದ್ಧಿಯಲ್ಲಿ ಯಾವುದೇ ಅನ್ಯಾಯವಾದರೆ ಸದಾ ಹೋರಾಡುವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಘಟಕ ಆಯೋಜಿಸಿದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಂದೆ ಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಘೋಷಣೆಯನ್ನು ಮಾಡಿದ್ದೆ. ಆದರೆ ನನ್ನ ಕಾರ್ಯಕರ್ತರು ಮತ್ತು ತಾಲೂಕಿನ ಜನತೆ ಇಚ್ಛೆ ಪಟ್ಟಲ್ಲಿ ಸ್ಪರ್ಧಿಸುತ್ತೇನೆ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸಮಯವಾಗಲಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರಲಿದ್ದು, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದರು. ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಪಂ ಅಧ್ಯಕ್ಷ ಶರಣಪ್ಪ ಪಾಟೀಲ್ ತೆಲ್ಕೂರ, ಮಾಜಿ ಜಿಪಂ ಅಧ್ಯಕ್ಷ ಶಿವಪ್ರಭು ಪಾಟೀಲ್, ಪಕ್ಷದ ತಾಲೂಕಾಧ್ಯಕ್ಷ ನಾಗೇಂದ್ರಪ್ಪ ಸಾಹುಕಾರ ದುಗನೂರ ಮಾತನಾಡಿದರು.
--