ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪರೋಪಕಾರದಿಂದ ಬದುಕು ಸಾರ್ಥಕ: ಶೈಲೇಶಾಚಾರ್ಯ

Lingaraj Badiger
Updated On : 27 May 2013, 11:14 am

ಗುಲ್ಬರ್ಗ: ವಯಸ್ಸಿನಿಂದ ಹಿರಿತನ ಪ್ರಾಪ್ತವಾಗದು, ಬದಲಾಗಿ ಜೀವಿತಾವಧಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕವಾಗಿ ಎಷ್ಟು ಪರೋಪಕಾರಿಯಾಗಿ ಜೀವನ ಸಾಗಿಸಿದ್ದೇವೆ ಎಂಬುವುದನ್ನು ಹಿರಿತನ ಅವಲಂಬಿಸುತ್ತದೆ ಎಂದು ವಿದ್ವಾನ್ ಶೈಲೇಶಾಚಾರ್ಯ ಗೋಠೆ ನುಡಿದರು.
ಲೋಕಾಪುರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಗುರುರಾಜ ಜೋಶಿ ಹಾಗೂ ಗುಲ್ಬರ್ಗದ ಹಿರಿಯ ಪತ್ರಕರ್ತ ಸುಭಾಷ ಜೋಶಿ ಅವರ ಷಷ್ಠಿಪೂರ್ತಿ ಸಮಾರಂಭದ ನಿಮಿತ್ತ ಬೆಂಗಳೂರಿನ ಶಾಣ್ಯಾ ಮಾಸ್ತರ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರು ಪರಂಪರೆಯಿಂದಲೇ ಬಂದಿರುವ ಶಾಣ್ಯಾ ಮಾಸ್ತರ (ಬಿ.ಎನ್. ಜೋಶಿ) ಅವರು ಜಾತ್ಯತೀತರಾಗಿದ್ದರಲ್ಲದೇ ಶಿಕ್ಷಣ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ವಿಧಾಯಕ ಕೆಲಸ ಮಾಡುವುದರೊಂದಿಗೆ ಮರಾಠಿಮಯವಾಗಿದ್ದ ಸ್ಥಳದಲ್ಲಿ ಕನ್ನಡ ಬಿತ್ತಿ ಬೆಳೆಸಿದವರು ಅಂಥವರ ಮಾರ್ಗದರ್ಶನದಲ್ಲಿ ಸಾಗಿ ಬಂದಿರುವ ಜೋಶಿ ಸಹೋದರರು ಕೂಡ ಜನಮುಖಿಯಾಗಿ ಅನೇಕ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದರು.
ಜಿ.ಬಿ. ಜೋಶಿ, ಎಸ್.ಬಿ. ಜೋಶಿ ದಂಪತಿಯನ್ನು ಶಿಷ್ಯ ಬಳಗ ಸನ್ಮಾನಿಸಿ ಗೌರವಿಸಿತು. ಗಣ್ಯರನ್ನು ಸತ್ಕರಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಕೆ.ಎಸ್. ಆಚಾರ್ಯ ಶಾಣ್ಯಾ ಮಾಸ್ತರ ಸೇವಾ ಪ್ರತಿಷ್ಠಾನದಿಂದ ಅನೇಕ ರಚನಾತ್ಮಕ ಮತ್ತು ಸಾಮಾಜಿಕ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರ ಹೆಸರಿನಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ವೆಬ್‌ಸೈಟ್‌ನ್ನು ಮಂತ್ರಾಲಯದಲ್ಲಿ ಲೋಕಾರ್ಪಣೆಗೊಳಿಸುವ ಚಿಂತನೆ ನಡೆದಿದೆ ಎಂದರು.
ಪ್ರತಿಷ್ಠಾನದ ಪ್ರಶಾಂತ ಗೋಕಾಕ ಸ್ವಾಗತಿಸಿದರು. ಜೆ. ಸುಧೀಂದ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement