ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟನೆ

Lingaraj Badiger
Updated On : 27 May 2013, 11:15 am

ಆಳಂದ: ಪಟ್ಟಣದ ತಾಲೂಕು ಪಂಚಾಯತಿ ಹತ್ತಿರದಲ್ಲಿರುವ ಸಮತಾ ಲೋಕ ಶಿಕ್ಷಣ ಸಮಿತಿಗೆ ಸಂಬಂಧಿಸಿದ ಕಟ್ಟಡದಲ್ಲಿ ಶಾಸಕ ಬಿ.ಆರ್. ಪಾಟೀಲ್ ಅವರ ಜನಸಂಪರ್ಕ ಕಚೇರಿಯನ್ನು ಕೆಜೆಪಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್ ಈಚೆಗೆ ಉದ್ಘಾಟಿಸಿದರು. ಬಳಿಕ ಸಭೆಯಲ್ಲಿ ಮಾತನಾಡಿದ ಶಿವುಪತ್ರಪ್ಪ ಪಾಟೀಲರು ತಾಲೂಕಿನಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರಿಗೆ ಈ ಕಚೇರಿ ಸಂಪರ್ಕಿಸಲು ತರೆದ ಬಾಗಿಲಾಗಿದ್ದು, ಜನರು ಇದರ ಲಾಭ ಪಡೆದುಕೊಳ್ಳಬೇಕು ಎಂದರು. ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ತಾಲೂಕಿನ 130 ಹಳ್ಳಿಗಳು ಮತಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು, ಕುಡಿಯುವ ನೀರು, ರಸ್ತೆ, ಶಿಕ್ಷಣ, ಸಾರಿಗೆ, ಶೌಚಾಲಯ, ಆರೋಗ್ಯ, ವಿದ್ಯುತ್ ಮೊದಲಾದ ಮೂಲ ಸಮಸ್ಯೆಗಳು ಎದುರಾದಾಗ ಜನರು ಕಚೇರಿಯಲ್ಲಿ ದೂರು ನೀಡಿದರೆ, ಹಂತ ಹಂತವಾಗಿ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಆಗಮಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಪುರುಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ಕೆಜೆಪಿ ರಾಜ್ಯ ಉಪಾಧ್ಯಕ್ಷ ಎಲ್.ಎಸ್.ರಾಠೋಡ, ತಾಲೂಕು ಪ್ರಧಾನ ಕಾರ್ಯದರ್ಶಿ ಬಾಬುರಾವ ಅರುಣೋದಯ, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ್, ಗುರುಶರಣ ಪಾಟೀಲ್ ಕೊರಳ್ಳಿ, ಪ್ರಮುಖರಾದ ಮಲ್ಲಿಕಾರ್ಜುನ ಬೋಳಣಿ, ವಿರಭದ್ರಪ್ಪ ಜವಳಿ ಮುನ್ನಹಳ್ಳಿ, ಸುಲ್ತಾನಪ್ಪ ವಾಗ್ದರಿ, ವಾಲಚಂದನಾಯಕ, ಭೀಮಾಶಂಕರ ಕೊಬ್ಬಿನ, ದಯಾನಂದ ಶೇರಿಕಾರ, ಬಿ.ಕೆ.ಪಾಟೀಲ್, ಭೋಜರಾಜ ಜುಬ್ರೆ, ವಿಠ್ಠಲ್ ಶಿಂಧೆ, ಪಂಡಿತ ಶೇರಿಕಾರ, ಸುಲೇಮಾನ ಮುಗುಟ, ಇಕ್ಬಾಲ್ ಬಿಲಗುಂದೆ, ಗುಲಾಮ ಹುಸೇನ್ ಟಪ್ಪೇವಾಲೆ, ಮಲ್ಲಿನಾಥ ಪರೇಣಿ, ಶರಣಬಸಪ್ಪ ವಾಗೆ, ಮಲ್ಲಿಕಾರ್ಜುನ ಪಾಟೀಲ್ ಸಕ್ಕರಗಾ ಇದ್ದರು.
ಸಾಮೂಹಿಕ ರಾಜಿನಾಮೆ ಬೆದರಿಕೆ
ಸಿಂಧನೂರು: ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ತಾಪಂ, ಜಿಪಂ, ನಗರಸಭೆ, ಎಪಿಎಂಸಿ ಸದಸ್ಯರು ಬೆದರಿಕೆ ಹಾಕಿದ್ದಾರೆ. ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಾಗೀರದಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement