ಸಚಿವ ಬಾಬುರಾವ ಚಿಂಚನಸೂರಗೆ ಸನ್ಮಾನ
ಸೇಡಂ: ನೂತನವಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜವಳಿ ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಗುರುಮಠಕಲ್ ಶಾಸಕ ಹಾಗೂ ಕೋಲಿ ಸಮಾಜದ ಧೀಮಂತ ನಾಯಕ ಬಾಬುರಾವ ಚಿಂಚನಸೂರ ಅವರನ್ನು ಸೇಡಂ ಕೋಲಿ ಸಮಾಜದ ವತಿಯಿಂದ ಗುಲ್ಬರ್ಗದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಸೋಮಶೇಖರ ಹೊಸ್ಮನಿ ಬಿಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ರಮೇಶ ಇಂಜಳ್ಳಿಕರ್, ಸಂಘಟನಾ ಕಾರ್ಯದರ್ಶಿ ಶರಣಪ್ಪ ಎಳ್ಳಿ, ಜಿಲ್ಲಾ ಉಪಾಧ್ಯಕ್ಷ ಭೀಮರಾವ ಅಳ್ಳೊಳ್ಳಿ, ನಗರಾಧ್ಯಕ್ಷ ಮಲ್ಲಿಕಾರ್ಜುನ ಗುಡ್ಡದ ಹಾಗೂ ಸಮಾಜದ ಮುಖಂಡ ಮತ್ತು ನಿಸರ್ಗ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಜಗನ್ನಾಥ ಪೊಲೀಸ್ ಪಾಟೀಲ್ ಇದ್ದರು.