ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮಾಜಕ್ಕೆ ಸಾಮೂಹಿಕ ವಿವಾಹಗಳು ಪೂರಕ: ಶಿರವಾಳ

Lingaraj Badiger
Updated On : 27 May 2013, 11:17 am

ಶಹಾಪುರ: ಸಾಮಾಜಿಕ ಸ್ವಾಸ್ಥ್ಯಕ್ಕೆ ಸಾಮೂಹಿಕ ವಿವಾಹಗಳು ಪೂರಕ. ಸಮಾಜದಲ್ಲಿ ದುಂದುವೆಚ್ಚದ ಮದುವೆಗಳು ಅನವಶ್ಯ ಎಂದು ಶಾಸಕ ಗುರು ಪಾಟೀಲ್ ಶಿರವಾಳ ನೂತನ ವಧು- ವರರಿಗೆ ಶುಭ ಹಾರೈಸಿ ಮಾತನಾಡಿದರು.
  ಭೀ.ಗುಡಿಯಲ್ಲಿ ದಸಂಸ ನೇತೃತ್ವದಲ್ಲಿ ನಡೆದ ಡಾ. ಅಂಬೇಡ್ಕರ್ ಜಯಂತಿ ಹಾಗೂ ಬೌದ್ಧ ಪೂರ್ಣಮೆ ಆಚರಣೆ ಅಂಗವಾಗಿ ಏರ್ಪಡಿಸಲಾದ 12ನೇ ಸರಳ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಗಳು ಸಮಾಜ ಮುಖಿಯಾಗಿ ಇಂಥಹ ಕಾರ್ಯಗಳನ್ನು ಮಾಡುವುದರಿಂದ ಸಂಘಟನೆಯ ಕ್ರಿಯಾಶೀಲತೆ ಹೆಚ್ಚುವುದರೊಂದಿಗೆ ಸಮಾಜಮುಖಿ ಕಾರ್ಯಕ್ಕೆ ಪ್ರೇರಣೆ ಸಿಕ್ಕಂತಾಗುತ್ತದೆ ಎಂದರು.
  ಸುಮಾರು 21 ಯುವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅಣದೂರ ಭಂತೆ ದಮ್ಮ ರಕ್ಷಿತರವರ ಸಾನ್ನಿಧ್ಯದಲ್ಲಿ ನಡೆದ ಈ ಸರಳ ವಿವಾಹ ಸಮಾರಂಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ ಕಾಂಗ್ರೆಸ್ ಮುಖಂಡರಾದ ಟೀ ಶಶಿಧರ ಮನೋಹರ ಹಡಗಲಿ ಜಿಲ್ಲಾ ಸಂಚಾಲಕರಾದ ಪುಂಡಲಿಕ ಗಾಯಕವಾರ್ಡ್ ಮುಖಂಡರಾದ ಮೋನಪ್ಪ ಹೊಸ್ಮನಿ ದೇವದುರ್ಗ ಕಾಲೇಜಿನ ಪ್ರಾಚಾರ್ಯ ಭೀಮರಾಯ ದೊಡ್ಮನಿ, ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ಕೊಂಬಿನ, ಆರೋಗ್ಯ ಸಾಹಾಯಕರ ಸಂಘದ ತಾಲುಕಾ ಅಧ್ಯಕ್ಷ, ಶರಣಬಸ್ಸವ ಹೊಸ್ಮನಿ, ಮರಿಲಿಂಗ ಕೊಳ್ಳುರ, ಜೆಇ ಶರಣಪ್ಪ ಬಡೀಗೇರ, ಮಾನಪ್ಪ ಕಟ್ಟಿಮನಿ, ಪ್ರಭು, ಜುನ್ನಾ ಗೋಪಾಲ, ತಳಗೇರಿ ಗುರಲಿಂಗಪ್ಪ, ಸಾಗರ ಸಿದ್ದಪ್ಪ, ಮಾಸ್ತರ ಕೊಡಮನಳ್ಳಿ ದೇವಿಂದ್ರಪ್ಪ ಮೇಟಿ, ಮರೆಪ್ಪ ಜಾಲಿಬೆಂಚಿ ಸೇರಿದಂತೆ ಅನೇಕ ಹಿರಿಯರು ವಧುವರರ ಅಪ್ತ ಬಂಧುಗಳು ಆಗಮಿಸಿದ್ದರು.
ಭೀಮರಾಯನಗುಡಿಯಲ್ಲಿ ದಸಂಸ ನೇತೃತ್ವ ನಡೆದ ಡಾ. ಅಂಬೇಡ್ಕರ್ ಜಯಂತಿ ಹಾಗೂ ಬೌದ್ಧ ಪೂರ್ಣಮೆ ಆಚರಣೆ ಅಂಗವಾಗಿ ಏರ್ಪಡಿಸಲಾದ 12ನೇ ಸರಳ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ
ಈ ಸಮಾರಂಭದ ಅಧ್ಯಕ್ಷತೆ ಜಿಲ್ಲಾ ಖಜಾಂಚಿ ಡಾ. ರವೀಂದ್ರನಾಥ ಹೊಸ್ಮನಿ ವಹಿಸಿದ್ದರು. ಜಿ.ಸಂ. ಸಂಚಾಲಕರಾದ ಹೊನ್ನಪ್ಪ ಗಂಗನಾಳ ಪ್ರಾಸ್ತಾವಿಕ ಮಾತನಾಡಿದರು. ಬೀಮರಾಯ ಸೈದಾಪುರ ಕಾರ್ಯಕ್ರಮ ನಿರೂಪಿಸಿ, ರಾಯಪ್ಪ ಗಂಗನಾಳ ಸ್ವಾಗತಿಸಿದರು. ಲಕ್ಷ್ಮಣ ಸೈದಾಪುರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement