ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಾಡಹಗಲೇ ಮನೆ ದರೋಡೆ

Lingaraj Badiger
Updated On : 27 May 2013, 11:18 am

ಯಾದಗಿರಿ: ನಗರದ ಲಕ್ಷ್ಮೀ ನಗರ ಬಡಾವಣೆಯ ಮನೆಯೊಂದರಲ್ಲಿ ಹಾಡಹಗಲೇ 19 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಭಾನುವಾರ ನಡೆದಿದೆ.
  ನಗರದ ವಿಶ್ವನಾಥರಡ್ಡಿ ಹಾಗೂ ಅವರ ಮನೆಯಲ್ಲಿ ಬಾಡಿಗೆದಾರರಾಗಿದ್ದ ಆಂಧ್ರ ಮೂಲದ ವೀರವೆಂಕಟ ಸತ್ಯನಾರಾಯಣ ಎಂಬುವವರ ಮನೆ ಕಳವಿಗೆ ಈಡಾಗಿದ್ದು. ವಿಶ್ವನಾಥರಡ್ಡಿ ಅವರ ಕುಟುಂಬವು ತಾಲೂಕಿನ ಮುಷ್ಟೂರಿನಲ್ಲಿ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರಕ್ಕೆ ತೆರಳಿದಾಗ ಈ ಘಟನೆ ಜರುಗಿದ್ದು, ಇದೇ ಸಂದರ್ಭದಲ್ಲಿ ಬಾಡಿಗೆದಾರರಾಗಿದ್ದ ವೀರವೆಂಕಟ ಸತ್ಯನಾರಾಯಣ ಕುಟುಂಬವು ಕೂಡ ಊರಲ್ಲಿ ಇರಲಿಲ್ಲವೆಂದು ತಿಳಿದು ಬಂದಿದೆ.
  ಈ ಸಂದರ್ಭವನ್ನು ಉಪಯೋಗಿಸಿಕೊಂಡ ಕಳ್ಳರು ವಿಶ್ವನಾಥರಡ್ಡಿಯವರ ಮನೆಯಲ್ಲಿದ್ದ 38 ತೊಲಿ ಚಿನ್ನ, ಹಾಗೂ 4.20 ಲಕ್ಷ ನಗದು ದೋಚಿದ್ದಾರೆ. ಅಲ್ಲದೆ, ವೀರವೆಂಕಟ ಸತ್ತನಾರಾಯಣರವರ ಮನೆಯಲ್ಲಿ 2 ತೊಲಿ ಚಿನ್ನ ಹಾಗೂ 20 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಎರಡು ಕುಟುಂಬದವರು ಸಂಜೆ ವಾಪಸ್ಸಾದಾಗ ಘಟನೆ ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
  ಹತ್ತಿರದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸ ಇದ್ದರು ಕಳ್ಳತನ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement