ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಾಳುಬಿದ್ದ ನೀರಿನ ತೊಟ್ಟಿ

Lingaraj Badiger
Updated On : 27 May 2013, 11:14 am

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಮೇ 26
ತಾಲೂಕಿನ ಮರಗೋಳ ಗ್ರಾಮದಲ್ಲಿ ಬೇಸಿಗೆ ಕಾಲದಲ್ಲಿ ಜಾನುವಾರಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಎಪಿಎಂಸಿ ವತಿಯಿಂದ ನಿರ್ಮಿಸಿದ ನೀರಿನ ತೊಟ್ಟಿ ಇದೀಗ ಪಾಳು ಬಿದ್ದಿದೆ.
ಈ ತೊಟ್ಟಿ ಎಪಿಎಂಸಿಯವರು 2008-09ನೇ ಸಾಲಿನಲ್ಲಿ ನಿರ್ಮಿಸಿದ್ದರು. ಆದರೆ, ತೊಟ್ಟಿಯಲ್ಲಿ ನೀರು ಇದೆಯೋ ಇಲ್ಲವೋ ಎಂದು ಎಪಿಎಂಸಿ ಹಾಗೂ ಗ್ರಾಪಂ ದಂಡೋತಿಯವರು ಕಣ್ಣು ಹಾಯಿಸದೆ ಇರುವುದರಿಂದ ತೊಟ್ಟಿಯು ಹಾಳಾಗಿ ಹೋಗಿದ್ದು, ಇಲ್ಲಿ ಗ್ರಾಮಸ್ಥರು ಕಟ್ಟಿಗೆ ಹಾಕುತ್ತಿದ್ದಾರೆ.
ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಇಂತಹ ಸಮಯದಲ್ಲಿ ಜಾನುವಾರುಗಳಿಗೆ ಅಗತ್ಯವಾಗಿ ಬೇಕಾಗಿರುವ ತೊಟ್ಟಿಯ ನೀರು ಇಲ್ಲಿ ಸಿಗುತ್ತಿಲ್ಲ. ಈ ತೊಟ್ಟಿಯನ್ನು ಜನರು ಕಟ್ಟಿಗೆ ಹಾಕಲು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ಎಪಿಎಂಸಿ ಹಾಗೂ ಗ್ರಾಪಂ ಅಧಿಕಾರಿಗಳು ಗಮನ ಹರಿಸಿ ಕೂಡಲೇ ಕಟ್ಟಿಗೆಯನ್ನು ಹೊರ ತೆಗೆಸಿ ಜಾನುವಾರುಗಳಿಗೆ ನೀರು ಕಲ್ಪಿಸಲು ಮುಂದಾಗಬೇಕಿದೆ.

ನೇತ್ರ ಉಚಿತ ಚಿಕಿತ್ಸಾ ಶಿಬಿರ
ಗುಲ್ಬರ್ಗ: ಆಳಂದ ತಾಲೂಕಿನ ಎ.ವಿ. ಪಾಟೀಲ್ ಪದವಿ ಕಾಲೇಜಿನಲ್ಲಿ ಜರ್ಮನಿಯ ಹಮಾರ ಬಂಧನ ಸ್ವಯಂ ಸೇವಾ ಸಂಸ್ಥೆ ಹಾಗೂ ಹೈ-ಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ನೇತ್ರ ಚಿಕಿತ್ಸಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ 280 ಜನರಿಗೆ ಚಿಕಿತ್ಸೆ ನೀಡಲಾಯಿತು. ನೇತ್ರ ಚಿಕಿತ್ಸಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ಪೂಜಾರಿ ಅವರ ನೇತೃತ್ವದಲ್ಲಿ ನೇತ್ರ ತಜ್ಞ ಡಾ. ವಿಶ್ವನಾಥ ರೆಡ್ಡಿ, ಡಾ. ರಾಜಶ್ರೀ ರೆಡ್ಡಿ, ಡಾ. ಸಂತೋಷ ಪಾಟೀಲ್, ಡಾ. ಪ್ರಜ್ವಲ್ ರೆಡ್ಡಿ, ಡಾ. ಸುಮಿತ ದೇಶಪಾಂಡೆ, ಡಾ. ಕವಿತಾ ಸಲಗರ, ಡಾ. ಮಂಜುಳಾ ಮಂಗಾಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement