ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು..
ಗುಲ್ಬರ್ಗ: ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಗ್ರಾಮಗಳನ್ನು ಆಯ್ಕೆ ಮಾಡಿ ಜನಸ್ಪಂದನ ಸಭೆಗಳನ್ನು ನಡೆಸುವಂತೆ ನಿರ್ದೇಶನ ನೀಡಿದೆ. ಈ ಹಿನ್ನಲೆಯಲ್ಲಿ ಆಯಾ ತಾಲೂಕುಗಳಲ್ಲಿನ ದೊಡ್ಡ ಗ್ರಾಮಗಳಲ್ಲಿ ಜನಸ್ಪಂದನ ಸಭೆಗಳನ್ನು ಆಯಾ ತಾಲೂಕಿಗೆ ಸಂಬಂಧಪಟ್ಟ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಜರುಗಿಸುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅದರಂತೆ ಜಿಲ್ಲೆಯ ಆಯಾ ತಾಲೂಕಿನ ಹೋಬಳಿಯಲ್ಲಿ ಜೂ.1ರಂದು ಜನಸ್ಪಂದನ ಸಭೆಗಳನ್ನು ನಡೆಸಲಾಗುವುದು. ತಾಲೂಕು, ಸಮಯ, ಹೋಬಳಿ ಮತ್ತು ಸಭೆ ನಡೆಯುವ ಸ್ಥಳಗಳ ವಿವರ ಇಂತಿದೆ. ಗುಲ್ಬರ್ಗ- ಬೆಳಗಿನ 10 ಗಂಟೆಗೆ ಮಹಾಗಾಂವ- ಗ್ರಾಪಂ ಕಾರ್ಯಾಲಯ ಜೀವಣಗಿ. ಆಳಂದ- ಬೆ.11ಕ್ಕೆ- ನಿಂಬರ್ಗಾ- ಗ್ರಾಪಂ ಕಾರ್ಯಾಲಯ ಯಳಸಂಗಿ. ಅಫಜಲ್ಪುರ- ಬೆ.11ಕ್ಕೆ ಕರಜಗಿ- ಗ್ರಾಪಂ ಕಾರ್ಯಾಲಯ ಕರಜಗಿ. ಜೇವರ್ಗಿ- ಬೆ.10ಕ್ಕೆ- ನೆಲೋಗಿ- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬದನಿಹಾಳ. ಸೇಡಂ- ಬೆ.11 ಗಂಟೆಗೆ ಕೋಡ್ಲಾ- ಗ್ರಾಪಂ ಕಾರ್ಯಾಲಯ ಜಾಕನಪಲ್ಲಿ. ಚಿತ್ತಾಪುರ- ಬೆ. 11.30ಕ್ಕೆ ಗುಂಡಗುರ್ತಿ- ಗ್ರಾಪಂ ಕಾರ್ಯಾಲಯ ಹೆಬ್ಬಾಳ. ಚಿಂಚೋಳಿ- ಬೆ. 10.30ಕ್ಕೆ ಐನಾಪುರ- ಶಾಲಾ ಆವರಣ ಕೋಟಗಾ.