ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕರ್ಜಗಿ: ತಪ್ಪಿತು ಬಾಲ್ಯ ವಿವಾಹ

Rashmi Kasaragodu
Updated On : 28 May 2013, 1:04 am

ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಕಜಗಿ ಗ್ರಾಮದಲ್ಲಿ ಸೋಮವಾರ ನಡೆಯಬೇಕಿದ್ದ ಬಾಲ್ಯವಿವಾಹ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯವರ ಸಕಾಲಿಕ ಮದ್ಯಸ್ಥಿಕೆಯಿಂದಾಗಿ ತಪ್ಪಿದೆ. ಇದರಿಂದಾಗಿ ಬಾಲ್ಯ ವಿವಾಹದ ಅನಿಷ್ಠ ಪದ್ಧತಿಗೆ ಒಳಗಾಗಿ ಮಾಂಗಲ್ಯ ಧರಿಸಿ ಸಂಸಾರ ಬಂಧನದೊಳಗೆ ಸಿಲುಕಬೇಕಿದ್ದ 8ನೇ ತರಗತಿ ಬಾಲಕಿ ತನ್ನ ಪ್ರೌಢಶಾಲಾ ಶಿಕ್ಷಣ ಮುಂದುವರಿಸಲು ಅನುಕೂಲವಾಗಿದೆ.ಮದುವೆಯ ತಯಾರಿ: ಕರ್ಜಗಿಯಲ್ಲಿನ 22 ವರ್ಷ ವಯಸ್ಸಿನ ಕಾರ್ಮಿಕ ವರನಿಗೆ 8ನೇ ತರಗತಿ ಓದುವ 15 ವರ್ಷ ವಯಸ್ಸಿನ ಬಾಲಕಿಯನ್ನು ಮದುವೆ ಮಾಡಲು ತಯಾರಿ ನಡೆದಿತ್ತು. ಈ ವಿಚಾರ ಗೊತ್ತಾಗಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯವರು ಈ ವಿವಾಹ ಕಾನೂನು ಬಾಹೀರ ಎಂದಿದ್ದರಲ್ಲದೆ ನಡೆಸಬಾರದೆಂದು ಸೂಚನೆ ಸಹ ನೀಡಿದ್ದರು. ಸಮಿತಿಯವರ ಸೂಚನೆಯಿಂದ ಹೆದರಿದ ಕುಟುಂಬದವರು ಬಾಲ್ಯವಿವಾಹ ನಡೆಸಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement