ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಂದಾಪುರ ಬ್ಯಾರೇಜ್ ಕಳಪೆ ಕಾಮಗಾರಿ

Lingaraj Badiger
Updated On : 28 May 2013, 10:47 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮೇ 27
ಪಟ್ಟಣದ ಚಂದಾಪುರ ನಗರದ ಪಕ್ಕದಲ್ಲಿ ಹರಿಯುವ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗಿರುವ ಬ್ಯಾರೇಜ್ಗೆ ಶಾಸಕ ಡಾ. ಉಮೇಶ ಜಾಧವ ಭಾನುವಾರ ಭೇಟಿ ನೀಡಿ  ಪರಿಶೀಲನೆ ನಡೆಸಿದರು.
ಹನುಮಾನ ದೇವಾಲಯದ ಪಕ್ಕದಲ್ಲಿ ಹರಿಯುವ ಮುಲ್ಲಾಮಾರಿ ನದಿಗೆ ಕಳೆದ 3 ವರ್ಷಗಳ ಹಿಂದೆ 1.44 ಕೋಟಿ ಅಂದಾಜು ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ ಕಾಮಗಾರಿಯಲ್ಲಿ ನದಿಯಲ್ಲಿನ ಉಸುಕು ಬಳಕೆ ಮಾಡಿಕೊಳ್ಳಲಾಗಿದೆ. ಸಿಮೆಂಟ್ ಪ್ರಮಾಣ ಅತಿ ಕಡಿಮೆ ಬಳಸಲಾಗಿದೆ. ಈ ಬ್ಯಾರೇಜ್ ಮುಂದಿನ ದಿನಗಳಲ್ಲಿ ನದಿಗೆ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡರು ಶಾಸಕರ ಗಮನಕ್ಕೆ ತಂದರು.
ಶಾಸಕರ ಬೇಸರ: ನದಿಯ ದಡದಲ್ಲಿರುವ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಬ್ಯಾರೇಜ್ ನಿರ್ಮಾಣಗೊಳಿಸಲಾಗಿದೆ. ಆದರೆ ರೈತರು ನೀರಾವರಿ ಸೌಲಭ್ಯ ಪಡೆದುಕೊಳ್ಳುತ್ತಿಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
ಬ್ಯಾರೇಜ್ ಸುತ್ತಲೂ ಮುಳ್ಳಿನ ಪೊದೆಗಳು ಮತ್ತು ಹುಲ್ಲು, ಪಾಚಿ ತುಂಬಿಕೊಂಡಿದೆ. ಮಳೆಗಾಲದಲ್ಲಿ ನೀರು ರಭಸವಾಗಿ ಹರಿಯುತ್ತದೆ. ಆದರೆ ಗೇಟುಗಳನ್ನು ಸರಿಯಾಗಿ ಜೋಡಿಸಿಲ್ಲ.
 ಕನಕಪುರ, ನಿಮಾಹೊಸಳ್ಳಿ, ಕೊಟಗಾ ಮುಂತಾದ ಗ್ರಾಮಗಳ ಹತ್ತಿರ ನಿರ್ಮಿಸಿದ ಬ್ಯಾರೇಜ್ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಅಧಿಕಾರಿಗಳಿಂದ ಸಂಪೂರ್ಣವಾದ ಮಾಹಿತಿಯನ್ನು ಪಡೆದು ಮುಂದಿನ ಕ್ರಮ ಕೈಕೊಳ್ಳಲಾಗುವುದು ಎಂದು ಶಾಸಕ ಡಾ. ಉಮೇಶ ಜಾಧವ ತಿಳಿಸಿದರು.
ಗೌರಿ ಶಂಕರ ಉಪ್ಪಿನ, ಗಣಪತರಾವ, ರಾಮಶೆಟ್ಟಿ ಪವಾರ, ಬಸವಣ್ಣ ಪಾಟೀಲ್, ಭೀಮರಾವ ರಾಠೋಡ, ಮೇಘರಾಜ ರಾಠೋಡ, ವಿಜಯಕುಮಾರ ಗಂಗನಪಳ್ಳಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement