ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರಿನ ಸಮಸ್ಯೆ: ಮುನ್ನೆಚ್ಚರಿಕೆ ವಹಿಸದಿದ್ರೆ ಇನ್ನಷ್ಟು ಗಂಭೀರ

Lingaraj Badiger
Updated On : 28 May 2013, 10:43 am

ಶಹಾಪುರ: ಪಟ್ಟಣ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಹನಿ ನೀರಿಗಾಗಿ ಹರದಾರಿ ಹೋಗುವ ಸ್ಥಿತಿ ಬಂದೊದಗಿದೆ.
 ಆಕಾಶದಲ್ಲಿ ಮೋಡ ಚದುರಿಹೋದಂತೆ ನೀರಿನ ವ್ಯವಸ್ಥೆಯು ದಿನಗಳೆದಂತೆ ಕಡಿಮೆಯಾಗುತ್ತಿರುವುದು ಜನತೆಗೆ ತೀವ್ರ ಆತಂಕ ತಂದೊಡ್ಡಿದೆ. ಎಲ್ಲೆಡೆ ನೀರಿನ ಹಾಹಾಕಾರ ಬೇಸಿಗೆ ಪ್ರಾರಂಭದಿಂದಲು ನಡೆದಿದ್ದು, ಪ್ರಸ್ತುತ ಮುಂಗಾರು ಹಂಗಾಮು ಸಮೀಪಿಸುತ್ತಿದ್ದರೂ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತಿದೆ.
 ಪಟ್ಟಣದಲ್ಲಿ 50 ಸಾವಿರ ಜನಸಂಖ್ಯೆನುಗುಣವಾಗಿರುವ ನೀರು ಸಂಗ್ರಹಣಾ ಕೇಂದ್ರ (ಫಿಲ್ಟರ್ ಬಾಡ್)ನಲ್ಲಿ ಮೂರ್ನಾಲ್ಕು ಅಡಿ ಮಾತ್ರ ನೀರು ಇದ್ದು, ಜೂನ್ ತಿಂಗಳು ನೀರು ತಲುಪಿಸುವುದು ಸಾಹಸವಾಗಿದೆ.
ಕೊಡಗಳ ಸಾಲು: ಕೆರೆ ಹೂಳು ತುಂಬಿದ್ದು, ಎಲ್ಲೆಡೆ ಎಲೆ ಬಳ್ಳಿಗಳಿಂದ ಆವೃತವಾಗಿದ್ದು ನೀರು ಇನ್ನೆಷ್ಟು ದಿನ ಬಿಡಬೇಕೆಂದು ವಿಚಾರ ಮಾಡುವಂತಾಗಿದೆ. ಪಟ್ಟಣದಲ್ಲಿ ನಾಲ್ಕು ಕಡೆ ಟ್ಯಾಂಕುಗಳಿದ್ದು ಇವೆಲ್ಲವು ಫಿಲ್ಟರ್ ಬಾಡ್ನಿಂದಲೇ ನೀರು ತುಂಬಬೇಕು, ಉಳಿದಂತೆ ಪುರಾತನವಾದ ಎರಡು ಭಾವಿಗಳಿದ್ದು, ನಾಲ್ಕಾರು ಕಡೆ ಪಂಪ್ಸೆಟ್ ಸೌಲಭ್ಯವಿದ್ದರೂ ನೀರು ನಿರ್ವಹಣೆಯ ಬಗ್ಗೆ ಜಾಗೃತಿ ವಹಿಸದಿರುವುದಕ್ಕೆ ನೀರಿನ ಕೊರತೆ ಎದ್ದು ಕಾಣುತ್ತಿದೆ. ಎರಡು ದಿನಕ್ಕೊಮ್ಮೆ ನೀರು ಬಂದರೂ ಪಟ್ಟಣದಾದ್ಯಂತ ಕೊಡಗಳ ಉದ್ದನೇ ಸರತಿ ಸಾಲು ಕಂಡುಬರುತ್ತಿದೆ.
  ಮನೆಗಳಿಗೆ ನಳದ ಕನೆಕ್ಷನ್ ತೆಗೆದುಕೊಂಡವರಲ್ಲಿ ಕೆಲವರು ತಮಗೆ ನೀರು ಸಾಕಾದಾಗ ಅದನ್ನು ಬಂದ್ ಮಾಡದೇ ಚರಂಡಿಗಳಿಗೆ ನೀರು ಬಿಡುತ್ತಿರುವುದು. ಇದನ್ನು ನೋಡಿಯು ನೋಡದಂತಿರುವ ಆಡಳಿತ ನಮಗೇಕೆ ಉಸಾಬರಿ ಎಂದು ಜಾಣ ಕುರುಡುತನ ಮೆರೆಯುತ್ತಿದೆ. ನೀರಿಗಾಗಿ ಹಾಹಾಕಾರವಿರುವಾಗ ನೀರನ್ನು ಪೋಲು ಮಾಡುತ್ತಿರುವವರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement