ಮಠಗಳ ಭೇಟಿಯಿಂದ ನೆಮ್ಮದಿ ಸಾಧ್ಯ: ಪಡುಕೋಟಿ
ಸುರಪುರ: ಜಂಜಾಟದ ಬದುಕಿನಲ್ಲಿ ಬದುಕುತ್ತಿರುವ ನಮಗೆ ನೆಮ್ಮದಿ, ಶಾಂತಿ, ಸಹನೆ ಇಲ್ಲದಂತಾಗಿದೆ.
ಆ ನಿಟ್ಟಿನಲ್ಲಿ ಮಠ- ಮಾನ್ಯಗಳಿಗೆ ಭೇಟಿ ಕೊಡುವುದರಿಂದ ಬದುಕಿನಲ್ಲಿ ನೆಮ್ಮದಿ ಪಡೆಯಲು ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಬಸವರಾಜ ಪಡುಕೋಟಿ ನುಡಿದರು.
12ನೇ ಶತಮಾನ ಶಿವಶರಣ ಕುರಿತು ಉಪನ್ಯಾಸ ನೀಡಿದ ಪ್ರಕಾಶ ಅಂಗಡಿ, 12ನೇ ಶತಮಾನ ಜಗತ್ತಿನಲ್ಲಿಯೇ ಸುವರ್ಣಯುಗ, ಈ ಶತಮಾನ ಶೋಷಣೆಗೊಳಗಾದ ಅನೇಕ ಸಮುದಾಯಗಳಿಗೆ ಮೊದಲ ಸ್ವಾತಂತ್ರ್ಯ ಸಿಕ್ಕ ಯುಗ.
ಅನುಭವ ಮಂಟಪ ಎಂಬ ಜಗತ್ತಿನ ಮೊದಲ ಸಂಸತ್ತನ್ನು ಪರಿಚಯಿಸಿದ ಕೀರ್ತಿ ಬಸವಣ್ಣಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಮತ್ತು ಭಕ್ತರು ಹಾಜರಿದ್ದರು.