ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯೋಜನೆ ನೀರುಪಾಲು; ನೀಗದ ನೀರಿನ ಸಮಸ್ಯೆ

Lingaraj Badiger
Updated On : 28 May 2013, 10:48 am

ಚಿಂಚೋಳಿ: ತಾಲೂಕಿನ ಸಾಲೇಬೀರನಳ್ಳಿ ಗ್ರಾಪಂ ವ್ಯಾಪ್ತಿಯ ಜಂಗ್ಲೀಪೀರ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ತಾಂಡಾದ ಜನರು ಆರೋಪಿಸಿದ್ದಾರೆ. ಜಂಗ್ಲಿಪೀರ ತಾಂಡಾದ ಜನರಿಗೆ ಸಮರ್ಪಕವಾಗಿ ನೀರು ಪೂರೈಸಲು ಕಿರು ನೀರು ಸರಬರಾಜು ಯೋಜನೆ ಅಡಿಯಲ್ಲಿ ಕೈಕೊಂಡ ಕಾಮಗಾರಿಗಳು ತುಂಬಾ ಕಳೆಪೆ ಮಟ್ಟದ್ದಾಗಿವೆ ಎಂದು ದೂರಿದ್ದಾರೆ.
ನೀರಿನ ಗುಮ್ಮಿಗಳಿಂದ ನೀರು ಸೋರಿಕೆಯಾಗುತ್ತಿರುವುದರಿಂದ ಜನರಿಗೆ ಕುಡಿಯಲಿಕ್ಕೆ ನೀರು ಸಿಗುತ್ತಿಲ್ಲ. ದನಕರುಗಳಿಗೆ ನೀರಿನ ತೊಂದರೆಯಾಗಿದೆ. ಕಳೆದ ಒಂದು ತಿಂಗಳಿಂದ ಜಂಗ್ಲಿಪೀರ ತಾಂಡಾದಲ್ಲಿ ಕುಡಿಯುವ ನೀರಿನ ತೊಂದರೆ ಬಗ್ಗೆ ಸಾಲೇಬೀರನಳ್ಳಿ ಗ್ರಾಪಂ ಕಾರ್ಯದರ್ಶಿ, ಪಿಡಿಒ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಗಮನಹರಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement