ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅವ್ಯವಹಾರ 'ಖಾತ್ರಿ': ಅಮಾನತು

Lingaraj Badiger
Updated On : 29 May 2013, 11:18 am

ಯಾದಗಿರಿ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 20 ಲಕ್ಷ ಅವ್ಯವಹಾರ ನಡೆಸಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಪಂ ಸಿಇಒ ಆದೇಶಿಸಿದ್ದಾರೆ. ಯಾದಗಿರಿ ತಾಲೂಕಿನ ಯಕ್ತಾಪುರ ಪಿಡಿಒ ಅನ್ಸಾರ್ ಪಟೇಲ ಹಾಗೂ ಜಲಾನಯನ ಇಲಾಖೆ ಸಹಾಯಕ ಕೃಷಿ ಅಧಿಕಾರಿ ವೆಂಕಟೇಶ ದೇಸಾಯಿ ಅಮಾನತುಗೊಂಡ ಅಧಿಕಾರಗಳು. ಕಾಮಗಾರಿ ನಿರ್ವಹಿಸದೇ ಬೋಗಸ್ ಆಗಿ ಎಂಐಎಸ್‌ನಲ್ಲಿ ದಾಖಲಿಸಿದ ಆರೋಪದ ಮೇಲೆ ಈ ಇಬ್ಬರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲಾನಿ ಆದೇಶ ಹೊರಡಿಸಿದ್ದಾರೆ.
ಠಾಣೆಗೆ ವಿದ್ಯಾರ್ಥಿ: ಎಸ್‌ಐ ಅಮಾನತು
ಗುಲ್ಬರ್ಗ: ನಗರದಲ್ಲಿ ವೈದ್ಯ ವಿದ್ಯಾರ್ಥಿಯನ್ನು ವಿನಾಕಾರಣ ಠಾಣೆಗೆ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಬಿ. ನಗರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶಕುಮಾರ ಸೋಮವಾರ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ ವಿರುದ್ಧ ಇನ್ನೂ ಹಲವಾರು ಪ್ರರಣಗಳು ದಾಖಲಾಗಿವೆ. ಆದರೆ, ಶನಿವಾರ ತಡರಾತ್ರಿ ಒಬ್ಬ ವೈದ್ಯ ವಿದ್ಯಾರ್ಥಿಯನ್ನು ಠಾಣೆಗೆ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸೇವೆಯಿಂದ ಅಮಾನತುಗೊಳಿ ಆದೇಶ ಹೊರಡಿಸಿ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ನೇಕಾರರ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ
ಯಾದಗಿರಿ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಕೈಮಗ್ಗ ನೇಕಾರರಿಗೆ ಕ್ರೆಡಿಟ್ ಕಾರ್ಡ್ ಯೋಜನೆಯಡಿ ನೇಕಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಪ್ರತಿ ನೇಕಾರರಿಗೆ ದುಡಿಮೆ ಬಂಡವಾಳ ಮತ್ತು ಕೈಮಗ್ಗ ಖರೀದಿಗೆ ಸಾಲದ ಸೌಲಭ್ಯವನ್ನು ಬ್ಯಾಂಕುಗಳಿಂದ ಒದಗಿಸಲಾಗುವುದು. ಈ ಯೋಜನೆಯಡಿ ನೇಕಾರರು ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ನಿವಾಸಿಯಾಗಿದ್ದು ನೇಕಾರಿಕೆಯಲ್ಲಿ ತೊಡಗಿರಬೇಕು. ನೇಕಾರರ ಗುರುತಿನ ಚೀಟಿ ಮತ್ತು ವಾಸಸ್ಥಳದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜೂ. 30ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆಗಳನ್ನು ಪಡೆಯಲು ಮತ್ತು ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಸಿಎಂಸಿ ಕಾಂಪ್ಲೆಕ್ಸ್, ಚಿತ್ತಾಪುರ ರಸ್ತೆ ಯಾದಗಿರಿ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಜಿಪಂ ಸಾಮಾನ್ಯ ಸಭೆ
ಯಾದಗಿರಿ: ಜಿಪಂ ಸಾಮಾನ್ಯ ಸಭೆಯನ್ನು ಜೂ. 7ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಮರೆಮ್ಮಾ ಎಸ್. ಶಾಣ್ಯಾನೋರ ಅಧ್ಯಕ್ಷತೆಯಲ್ಲಿ ಜರುಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement