ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲಾ ಕಸಾಪ ಸಮ್ಮೇಳನಕ್ಕೆ ರೇವೂರ ಆಯ್ಕೆ

Lingaraj Badiger
Updated On : 30 May 2013, 11:16 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 29
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜೂನ್ 15 ರಿಂದ 16ರವರೆಗೆ ನಡೆಯಲಿರುವ 13ನೇ ಜಿಲ್ಲಾ ಕಸಾಪ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ನೇತೃತ್ವದ ನಿಯೋಗವು ಶಾಸಕರನ್ನು ಭೇಟಿ ಮಾಡಿ ಸ್ವಾಗತ ಸಮಿತಿ ಕಾರ್ಯಧ್ಯಕ್ಷರಾಗಿ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಲು ಮನವಿ ಮಾಡಿಕೊಂಡರು.
ನಿಯೋಗದಲ್ಲಿ ಗೌರವ ಕಾರ್ಯದರ್ಶಿ ಬಿ.ಎಚ್. ನಿರಗುಡಿ, ಸುರೇಶ ಬಡಿಗೇರ್, ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ, ಎ.ಕೆ. ರಾಮೇಶ್ವರ, ಡಾ. ಶ್ರೀಶೈಲ್ ನಾಗರಾಳ, ಶಿವಶಾಂತರೆಡ್ಡಿ, ಅಪ್ಪಾರಾವ ಕುಲ್ಕರ್ಣಿ, ಎಸ್.ಎಲ್. ಪಾಟೀಲ್, ಸಿ.ಎಸ್. ಮಾಲಿಪಾಟೀಲ್, ಡಾ. ಚಿ.ಸಿ. ನಿಂಗಣ್ಣ, ಸಂಗಣ್ಣ ಬಿರಾದಾರ, ಶಿವಕುಮಾರ ದೊಡ್ಡಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement