ಡಿಎವಿ ಕಾಲೇಜಿಗೆ ಉತ್ತಮ ಫಲಿತಾಂಶ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 29
ಪ್ರಸಕ್ತ ಸಾಲಿನ ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ವಾಡಿಯ ಎಸಿಸಿಯ ಡಿಎವಿ ಶಾಲಾ ಮತ್ತು ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ.
10ನೇ ತರಗತಿಯಲ್ಲಿ ಒಟ್ಟು 57 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 21 ವಿದ್ಯಾರ್ಥಿಗಳು ಎ- 1, 9 ವಿದ್ಯಾರ್ಥಿಗಳು ಎ-2, 20 ವಿದ್ಯಾರ್ಥಿಗಳು ಬಿ-1, 7 ವಿದ್ಯಾರ್ಥಿಗಳು ಬಿ-2 ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ರಿಶಬ್ ಗುಪ್ತಾ, ಎಸ್.ಶೃತಿ, ಅರ್ಚನಾ ಎ, ವೈಷ್ಣವಿ ಪತಂಗೆ, ಅಂಬಿಕಾ ಪಾಟೀಲ್ ಮತ್ತು ಸ್ವಪ್ಲಾಸಿಂಗ್ ಎಂಬ 6 ವಿದ್ಯಾರ್ಥಿಗಳು ಗರಿಷ್ಠ ಸಿಜಿಪಿಎ 10 ಅಂಕಗಳನ್ನು ಪಡೆದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 12ನೇ ತರಗತಿಯಲ್ಲಿ ಒಟ್ಟು 27 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 25 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಐಶ್ವರ್ಯ ಸುತ್ರಾವೆ ಶೇ.92.2, ಆದರ್ಶ ಬಾಸುತ್ಕರ್ ಶೇ. 91.2, ಗಣೇಶ ಕಟ್ಟಿಮನಿ ಶೇ. 90.2, ಶುಭಮ ದಲೆರ್ ಶೇ. 89.2, ಸೈದಾ ರಾಬಿಯಾ ಬೇಗಂ ಶೇ. 88.2, ನಾಗಶ್ರೀ ಶೇ. 87.6, ವಿಕಾಸ ಪವಾರ ಶೇ. 87.2, ಸಲ್ಮಾ ಬೇಗಂ ಶೇ.85 ಗರಿಷ್ಠ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಎಸಿಸಿ ಸಿಮೆಂಟ್ ಕಂಪನಿಯ ನಿರ್ದೇಶಕ ಡಾ. ಎಸ್.ಬಿ. ಸಿಂಗ್, ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಬಿ.ಡಿ. ದಲೇರ್, ಡಿಎವಿ ಶಾಲೆಗಳ ದಕ್ಷಿಣ ವಲಯದ ನಿರ್ದೇಶಕಿ ಸೀತಾ ಕಿರಣ ಹಾಗೂ ಶಾಲೆಯ ಪ್ರಾಚಾರ್ಯ ಪ್ರಭಾಕರ್ ಅವರು ಮಕ್ಕಳ ಮತ್ತು ಶಿಕ್ಷಕರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.