ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರತಿಮೆಗಳ ಪ್ರತಿಷ್ಠಾಪನೆ

Lingaraj Badiger
Updated On : 30 May 2013, 11:17 am

ಗುಲ್ಬರ್ಗ: ನಗರದ ವರ್ತುಲ ರಸ್ತೆಯ ಹೈಕೋರ್ಟ್ ಸಂಚಾರಿ ಪೀಠದ ಮುಂದಿನ ಸತ್ಯನಾರಾಯಣ ನಗರದಲ್ಲಿ ಬುಧವಾರ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವರು ಹಾಗೂ ಅವತಾರತ್ರಯ ಮುಖ್ಯಪ್ರಾಣ ದೇವರ ಪ್ರತಿಮೆಗಳ ಪ್ರತಿಷ್ಠಾಪನೆ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಣ್ಣೂರು ವೇದೇಶತೀರ್ಥ ವಿದ್ಯಾಪೀಠದ ಕುಲಪತಿ ಅನಂತಾಚಾರ್ಯ ಅಕಮಂಚಿ, ಗೋಪಾಲಾಚಾರ್ಯ ಅಕಮಂಚಿ, ಗಿರೀಶಾಚಾರ್ಯ ಅವಧಾನಿ, ಹಣಮಂತಾಚಾರ್ಯ ಸರಡಗಿ, ವಿಷ್ಣುದಾಸಾಚಾರ್ಯ ಖಜೂರಿ, ಶ್ರೀನಿವಾಸಾಚಾರ್ಯ ಪದಕಿ, ಭೀಮಸೇನಾಚಾರ್ಯ ಜೋಷಿ, ಪ್ರಸನ್ನಾಚಾರ್ಯ, ಮೋಗರೆ ಗೋಪಾಲಾಚಾರ್ಯ, ವಿನೋದಾಚಾರ್ಯ ಗಲಗಲಿ ಇವರುಗಳಿಂದ ವಿವಿಧ ವಿಷಯಗಳ ಉಪನ್ಯಾಸಗಳು ನಡೆದವು. ಪ್ರಾಕ್ಟೂರ್ ಮಧುಸೂಧನಾಚಾರ್ಯ ಉಸ್ತುವಾರಿಯಲ್ಲಿ ಮಂದಿರ ಪುತ್ಥಳಿ ಪ್ರತಿಷ್ಠಾಪನೆ ಸಾಂಗೋಪಾಂಗವಾಗಿ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement