ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಫಾರ್ಮಸಿಯಲ್ಲಿ ಹೊಸ ಕೋರ್ಸ್ ಆರಂಭ

Lingaraj Badiger
Updated On : 30 May 2013, 11:17 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 29
ಕೇಂದ್ರ ಸರ್ಕಾರದ ವ್ಯಾಪ್ತಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದ ಮೇರೆಗೆ ಫಾರ್ಮಸಿಯಲ್ಲಿ ಡಾಕ್ಟರ್ ಪದವಿ ಪಡೆಯುವ ಕೋರ್ಸ್ ಪರಿಚಯಿಸಲಾಗಿದೆ ಎಂದು ಭಾರತೀಯ ಔಷಧ ಮಂಡಳಿ ಕಾರ್ಯಕಾರಿಣಿ ಸದಸ್ಯ ಡಾ. ಬಿ. ಜಯ್ಕರ್ ತಿಳಿಸಿದರು.
ಫಾರ್ಮಸಿ ಕೋರ್ಸ್ ಆರಂಭಿಸಲು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಫಾರ್ಮಸಿ ಕಾಲೇಜಿನಲ್ಲಿ ಮತ್ತು ರಾಜೀವಗಾಂಧಿ ಪಾರ್ಮಸಿ ಕಾಲೇಜಿನಲ್ಲಿ ಮಾಡಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿ ಪತ್ರಿಕೆಗಳಿಗೆ ಈ ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯುಸಿ ನಂತರ 6 ವರ್ಷಗಳ ಕಾಲ ಡಾಕ್ಟರ್ ಇನ್ ಫಾರ್ಮ್ ಕೋರ್ಸ್ನಲ್ಲಿ ಉತ್ತೀರ್ಣರಾಗಿ ವೈದ್ಯಾರಾಗಿ ಹೊರಹೊಮ್ಮಬಹುದಾಗಿದೆ. ಭಾರತೀಯ ಔಷಧ ಮಂಡಳಿ ರಾಷ್ಟ್ರದಲ್ಲಿನ 90 ಫಾರ್ಮಸಿ ಕಾಲೇಜುಗಳಲ್ಲಿ ಫಾರ್ಮ್ ಡಿ ಕೋರ್ಸ್ ಆರಂಭಿಸಿದೆ. ಈ ಕೋರ್ಸ್ನಲ್ಲಿ ತೇರ್ಗಡೆಯಾದವರು ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆಯಲ್ಲದೆ ಕೌನ್ಸೆಲಿಂಗ್ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.
ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ವೈದ್ಯರ ತೀವ್ರ ಕೊರತೆ ಉಂಟಾಗಿದೆ. ವೈದ್ಯರ ಕೊರತೆಯನ್ನು ತುಂಬುವ ಸದುದ್ದೇಶದಿಂದಲೇ ಇಂತಹ ಕೋರ್ಸ್ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಫಾರ್ಮಸಿಯಲ್ಲಿ ವೈದ್ಯ ಪದವಿ ಪಡೆದವರೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ವೈದ್ಯರಂತೆ ನೇರವಾಗಿ ರೋಗಿಗಳನ್ನು ಪರೀಕ್ಷಿಸಲು ಆಸ್ಪದ ಇರುವುದಿಲ್ಲ. ಒಮ್ಮೆ ವೈದ್ಯರು ಪರೀಕ್ಷಿಸಿದ ಬಳಿಕ ಮುಂದಿನ ಚಿಕಿತ್ಸೆಯನ್ನು ಫಾರ್ಮಸಿಯಲ್ಲಿ ವೈದ್ಯ ಪದವಿ ಪಡೆದವರೆ ನೀಡಬಹದಾಗಿದೆ ಎಂದು ಹೇಳಿದರು.
ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಮಹಾದೇವಪ್ಪ ರಾಂಪುರೆ, ಶರಣಗೌಡ ಮಾಲಿಪಾಟೀಲ್, ಡಾ. ಕಿಶೋರ ಸಿಂಗ್ ಛತ್ರಪತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement