ಬಸವ ಮಾರ್ಗ ಪ್ರಶಸ್ತಿಗೆ ಆಹ್ವಾನ
ಗುಲ್ಬರ್ಗ: ಸುರಪುರ ತಾಲೂಕಿನ ಬಸವ ಮಾರ್ಗ ಪ್ರತಿಷ್ಠಾನವು ರಾಜ್ಯ ಮಟ್ಟದಲ್ಲಿ ನೀಡುವ ಬಸವ ಮಾರ್ಗ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ. ಜೂನ್ 18ರಂದು ಸುರಪುರ ತಾಲೂಕಿನ ಸತ್ಯಂಪೇಟೆಯಲ್ಲಿ ನಡೆಯಲಿರುವ ಲಿಂ. ಗುರಪ್ಪ ಯಜಮಾನರ 26ನೇ ಸ್ಮರಣೋತ್ಸವ ಹಾಗೂ ಬಸವತತ್ವ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಸಂತೋಷ ಸತ್ಯಂಪೇಟೆ ತಿಳಿಸಿದ್ದಾರೆ. ಕೃತಿಗಳ ಎರಡು ಪ್ರತಿಗಳನ್ನು ಜೂನ್ 10ರ ಒಳಗಾಗಿ ಸಂತೋಷ ಸತ್ಯಂಪೇಟೆ, ಬಸವ ಮಾರ್ಗ, ಚರಬಸವೇಶ್ವರ ಕಾಲೋನಿ, ಶಹಾಪುರ- 585 223ಗೆ ಕಳುಹಿಸಲು ಕೋರಲಾಗಿದೆ. ವಿವರಕ್ಕೆ 94484 11672ಗೆ ಸಂಪರ್ಕಿಸಬಹುದು.