ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸವಜ್ಯೋತಿ-ಬಸವರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

Vishwanath S
Updated On : 31 May 2013, 12:25 pm

ಕ.ಪ್ರ.ವಾರ್ತೆ ,  ಗುಲ್ಬರ್ಗ ,  ಮೇ 30
ಬಿಜಾಪುರ ತಾಲೂಕಿನ ಆಹೇರಿ ಗ್ರಾಮದ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆಯಿಂದ ಬಸವ ಜಯಂತಿ ಹಾಗೂ ರಾಜ್ಯ ಮಟ್ಟದ ವಚನೋತ್ಸವ ಕಾರ್ಯಕ್ರಮದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ 2013-14ನೇ ಸಾಲಿನ ಬಸವಜ್ಯೋತಿ ರಾಜ್ಯ ಪ್ರಶಸ್ತಿ ಹಾಗೂ ಬಸವರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.
ನಾಡಿನ ಸಮಾಜದ ಪ್ರಗತಿಪರ ಅಭಿವೃದ್ಧಿಗಾಗಿ ಕನ್ನಡ ರಕ್ಷಣೆ, ಸಂಸ್ಕೃತಿ, ನಾಟಕ, ರಂಗಭೂಮಿ, ಸಂಗೀತ, ನೃತ್ಯ, ಪತ್ರಿಕೋದ್ಯಮ, ಚಿತ್ರಕಲೆ, ಶಿಕ್ಷಣ, ಛಾಯಾಚಿತ್ರ, ಚಲನಚಿತ್ರ, ಸಮಾಜ ಸೇವೆ, ಶಿಲ್ಪಕಲೆ, ಕ್ರೀಡೆ, ವೈದ್ಯಕೀಯ, ಪಶುವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ತಾಂತ್ರಿಕ, ಕೃಷಿ, ಜನಪದ ಯಕ್ಷಗಾನ, ಆಡಳಿತ, ಭರತನಾಟ್ಯ ಹಾಗೂ ಸಂಘ ಸಂಸ್ಥೆ ಮತ್ತು ಸರ್ಕಾರದ ವಿವಿಧ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವವರು ತಮ್ಮ ಇತ್ತೀಚಿನ 3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ತಾವು ಸಾಧನೆಗೈದ ಸಂಪೂರ್ಣ ವಿವರಗಳನ್ನೊಳಗೊಂಡ ಮಾಹಿತಿಯನ್ನು ಬಂಡೆಪ್ಪ ಜಿ. ತೇಲಿ ಅಧ್ಯಕ್ಷರು ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ, ಸಂಸ್ಕೃತಿ ವೇದಿಕೆ, ಆಹೇರಿ- 586 112 ತಾ. ಬಿಜಾಪುರ ಇವರಿಗೆ ಅಂಚೆ ಚೀಟಿ ಲಗತ್ತಿಸಿದ ಲಕೋಟೆಯೊಂದಿಗೆ ಜೂನ್ 17 ರೊಳಗಾಗಿ ಅರ್ಜಿ ಸಲ್ಲಿಸಬೇಕು. ವಿವರಕ್ಕೆ ಮೊ. 90088 45750ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement