...ನಿಲ್ಲದ ತಂಬಾಕು ಸೇವನೆ
ಗುಲ್ಬರ್ಗ: ರಸ್ತೆಗೆ ಡಾಂಬಾರು ಹಾಕಿ... ನಿಮ್ಮ ಶ್ವಾಸಕೋಶಗಳಿಗಲ್ಲ..., 18 ವರ್ಷ ಕೆಳಗಿನವರಿಗೆ ತಂಬಾಕು ಉತ್ಪನ್ನ ಮಾರಲೇಬೇಡಿ... ಎಂಬ ಸಂದೇಶಗಳೊಂದಿಗೆ ಗುಲ್ಬರ್ಗದಲ್ಲಿ ಮೇ 31ರ ಶುಕ್ರವಾರ ವಿಶ್ವ ತಂಬಾಕು ವಿರೋಧಿ ದಿನ ಅರ್ಥಪೂರ್ಣವಾಗಿ ಆಚರಿಸಲಾಯ್ತು.
ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಮುಖ್ಯರಸ್ತೆಗಳಲ್ಲಿ ಬಂದು ತಂಬಾಕು ಸೇವನೆ, ಧೂಮಪಾನದಿಂದ ಆಗುವ ಹಾನಿಗಳೇನು ಎಂಬುದನ್ನು ಫಲಕಗಳ ಮೂಲಕ ವಿವರಿಸುತ್ತ ತಂಬಾಕು ಸೇವಿಸಿ ಶ್ವಾಸಕೋಶಕ್ಕೆ ಡಾಂಬಾರು ಬಳಿಯಬೇಡಿ ಎಂದು ಬಲು ಮಾರ್ಮಿಕವಾಗಿರುವಂತಹ ಸಂದೇಶ ಸಾರ್ವಜನಿಕರ ವಲಯದಲ್ಲಿ ಸಾರಿದರು.
ತಂಬಾಕು ಸೇವನೆ ಬೇಡವೆಂಬ ಸಂದೇಶದೊಂದಿಗೆ ಯುವಕರ ಪಡೆ ಒಂದೆಡೆ ರ್ಯಾಲಿ ನಡೆಸುತ್ತಿದ್ದರೆ, ಇನ್ನೊಂದೆಡೆ ಯಥಾವತ್ತಾಗಿ ತಂಬಾಕು ಸೇವನೆ ನಡೆದಿತ್ತು. ಬೀಡಾ ಅಂಗಡಿಗಳಲ್ಲಿ ವರ್ತಕರು ಗುಟಖಾದ ಪೌಚ್ಗಳನ್ನು ಓರಣವಾಗಿಡುವಲ್ಲಿ ತಲ್ಲೀನರಾಗಿದ್ದರು.