ಚಿಲ್ಲರೆ ಸಮಸ್ಯೆ: ಹಾಲಿನ ದರ ಪರಿಷ್ಕರಣೆ
ಗುಲ್ಬರ್ಗ: ಗುಲ್ಬರ್ಗ ಹಾಲಿನ ಡೇರಿಯಿಂದ ಮಾರಾಟವಾಗುವ ಹಾಲಿನ ದರವನ್ನು ಚಿಲ್ಲರೆ ಸಮಸ್ಯೆಯನ್ನು ಪರಿಹರಿಸಲು ಹಾಲಿನ ದರವನ್ನು ಪರಿಷ್ಕರಿಸಲಾಗಿದೆ. ಅರ್ಧ ಲೀಟರ್ ಹಾಲಿನ ಬೆಲೆ 16.50 ಇರುವುದನ್ನು 17 ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ 50 ಪೈಸೆಗೆ ಸಮಾನವಾಗಿ 15 ಎಂ.ಎಲ್. ಹಾಲು ಹೆಚ್ಚುವರಿಯಾಗಿ ಪ್ಯಾಕ್ ಮಾಡಿ ಗ್ರಾಹಕರಿಗೆ ಒದಗಿಸಲಾಗುವುದು.
ಈ ಪರಿಷ್ಕೃತ ದರವು ಜೂನ್ 1ರಿಂದ ಜಾರಿಗೆ ಬರಲಿದೆ. ಚಿಲ್ಲರೆ ಹಣದ ಸಮಸ್ಯೆಯಿಂದಾಗಿ ಪರಿಷ್ಕರಿಸಲಾಗಿರುವುದಕ್ಕೆ ಗ್ರಾಹಕರು ಹಾಲು ಉತ್ಪಾದಕರ ಮಹಾಮಂಡಳಿಯೊಂದಿಗೆ ಸಹಕರಿಸುವಂತೆ ಗುಲ್ಬರ್ಗ ಡೇರಿಯ ಪ್ರಧಾನ ವ್ಯವಸ್ಥಾಪಕರು ಕೋರಿದ್ದಾರೆ.