ಪ್ರವೇಶಾವಕಾಶ ದಿನಾಂಕ ವಿಸ್ತರಣೆ
ಗುಲ್ಬರ್ಗ: ನಗರದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪದವಿ ಕೋರ್ಸ್ಗಳ ಪ್ರವೇಶಾವಕಾಶದ ಅಂತಿಮ ದಿನಾಂಕವನ್ನು ಸಾರ್ವಜನಿಕರ ಕೋರಿಕೆಯ ಮೇರೆಗೆ ಮೇ 30ರಿಂದ ಜೂ.2ರವರೆಗೆ ವಿಸ್ತರಣೆ ಮಾಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಪದವಿ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಜೂ.2ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ನ ಮೂಲಕ ಆನ್ಲೈನ್ನಲ್ಲಿಯೇ ಭರ್ತಿ ಮಾಡಬೇಕು. 2ನೇ ಹಂತದ ಅರ್ಜಿ ಭರ್ತಿ ಮಾಡುವ ಮುನ್ನ ನಿಗದಿತ ಶುಲ್ಕ ತುಂಬಬೇಕು.