ಬಸವಣ್ಣ ಸರ್ವರ ಹಿತ ಬಯಸಿದ ಸುಧಾರಕ: ಶ್ರೀಗಳು
ಸುರಪುರ: ಜಗತ್ತು ಕಂಡ ಅತ್ಯಂತ ನಿಷ್ಠುರ ವಿಚಾರವಾದಿಗಳಲ್ಲಿ ಬಸವಣ್ಣ ಒಬ್ಬರು. ಜಾತಿ, ಧರ್ಮವನ್ನು ಬದಿಗಿಟ್ಟು ಸರ್ವರಲ್ಲಿಯೂ ಸಮಾನತೆ ಸಾರಿದರು. ಸಮಾಜ ಸುಧಾರಣೆಯಲ್ಲಿ ನಿರತರಾಗಿದ್ದ ಅವರು ಧರ್ಮ ಜಾಗೃತಿಯಡಿ ಕಾಯಕ ಮಾಡಿ ಸಕಲರಿಗೂ ಒಳ್ಳೆಯದನ್ನೇ ಬಯಸಿದ ಮಹಾನ್ ಸುಧಾರಕ ಎಂದು ಚಿಗರಿಹಳ್ಳಿಯ ಮರುಳು ಶಂಕರದೇವರ ಗುರುಪೀಠದ ಸಿದ್ದಬಸವ ಕಬೀರಾನಂದ ಸ್ವಾಮೀಜಿ ನುಡಿದರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವೇಶ್ವರ ಯುವಕ ಸಂಘ, ಬಸವೇಶ್ವರ ನಾಮಫಲಕ ಉದ್ಘಾಟನೆ ಮತ್ತು ಬಸವ ಜಯಂತಿ ಶತಮಾನೋತ್ಸವದ ಆಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾಜದ ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿದರು. ಪ್ರಭುಲಿಂಗ ಸ್ವಾಮೀಜಿ ಇದ್ದರು. ಅಪೆಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಶಿವಾನಂದ ಮಾನಕರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಸವಲಿಂಗಪ್ಪ ಪಾಟೀಲ್, ಚಂದ್ರಶೇಖರಗೌಡ ಮಾಗನೂರು, ಚಂದ್ರಶೇಖರ ದಂಡಿನ್, ಜಿ.ಎಸ್. ಪಾಟೀಲ್, ಎಸ್.ಎಂ. ಕನಕರೆಡ್ಡಿ, ದೇವಿಂದ್ರಪ್ಪ ಕಳ್ಳಿಮನಿ, ಮನೋಹರ ಜಾಲಹಳ್ಳಿ, ಬಸವರಾಜ ದೇಶಮುಖ, ಸೋಮಶೇಖರ ಶಾಬಾದಿ, ಸಿದ್ರಾಮ ಇತರರು ಇದ್ದರು.
--