371(ಜೆ) ವಿಧಿ ಖರ್ಗೆ, ಧರ್ಮಸಿಂಗ್ ಶ್ರಮದ ಫಲ: ಸೈಯದ್ ಅಭಿಮತ
ಗುಲ್ಬರ್ಗ: ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಅವರ ಸಂಸದರಾಗದಿದ್ದರೆ ಹೈ-ಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ 371 (ಜೆ) ವಿಧಿ ಜಾರಿಯಾಗುತ್ತಿರಲಿಲ್ಲ ಎಂದು ಮಹಾನಗರ ಪಾಲಿಕೆ ಸದಸ್ಯ ಸೈಯದ್ ಸಜ್ಜಾದ್ ಅಲಿ ಇನಾಂದಾರ ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಸಂಘ- ಸಂಸ್ಥೆಗಳು ಅಥವಾ ವ್ಯಕ್ತಿಗಳು ಇದರ ಶ್ರೇಯಸ್ಸು ಪಡೆಯುವುದು ತಪ್ಪು. ಈ ಇಬ್ಬರು ನಾಯಕರು ಇಚ್ಛಾಶಕ್ತಿಯಿಂದ ಪ್ರಯತ್ನ ಮಾಡಿದ್ದರಿಂದಲೇ 371 ವಿಧಿ ಮಂಜೂರಾಗಿದೆ. ನೂರಾರು ಸಂಘ ಸಂಸ್ಥೆಗಳು ಇನ್ನೂರು 100 ವರ್ಷ ಹೋರಾಟ ಮಾಡಿದರೂ ಸಹ ನಮಗೆ 371 ವಿಧಿ ಮಂಜೂರಾಗುತ್ತಿರಲಿಲ್ಲ. 371ನೇ ವಿಧಿ ತಿದ್ದುಪಡಿಯಾಗಲು ಹೋರಾಟಗಾರರ ಪ್ರಯತ್ನ ಏನೂ ಇಲ್ಲ ಅದಕ್ಕಾಗಿ ಶ್ರೇಯಸ್ಸು ಪಡೆಯುವುದು ತಪ್ಪು ಎಂದು ಹೇಳಿಕೆ ನೀಡಿರುವ ಮಹಾನಗರ ಪಾಲಿಕೆ ಸದಸ್ಯ ಸೈಯದ್ ಸಜ್ಜಾದ್ ಅಲಿ ಇನಾಂದಾರ ಅವರ ಹೇಳಿಕೆಯನ್ನು ಪಂಚ ಜಿಲ್ಲೆ ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಖಂಡಿಸಿದ್ದಾರೆ.