ಗುರುವಿನಲ್ಲಿ ದೇವರು ಕಾಣಬೇಕು
ಕ.ಪ್ರ.ವಾರ್ತೆ, ಚಿತ್ತಾಪುರ, ನ.4
ಸ್ವಾರ್ಥತೆ ತುಂಬಿ ತುಳುಕುತ್ತಿರುವ ಇಂದಿನ ಸಮಾಜದಲ್ಲಿ ಸ್ವಾಮೀಜಿಗಳು ಜನತೆಗೆ ಅಧ್ಯಾತ್ಮದ ವಿಚಾರಗಳನ್ನು ಬಿತ್ತಿ ಅವರಲ್ಲಿ ಉತ್ತಮ ಸಂಸ್ಕಾರಗಳನ್ನು ನೀಡುವುದು ಹಾಗೂ ಜನತೆ ಗುರುಗಳಲ್ಲಿ ಶ್ರದ್ಧೆ ಭಕ್ತಿಯಿಂದ ಪೂಜಿಸಿದಾಗ ಮಾತ್ರ ಗುರುಗಳಲ್ಲಿ ದೇವರನ್ನು ಕಾಣಲು ಸಾಧ್ಯ ಎಂದು ಆನೆಗುಂದಿ ಸಂಸ್ಥಾನ ಏಕದಂಡಗಿ ಮಠದ ಗುರುನ್ನಾಥೇಂದ್ರ ಸರಸ್ವತಿ ಶ್ರೀ ನುಡಿದರು.
ದಿಗ್ಗಾಂವದ ಪಂಚಗೃಹ ಹಿರೇಮಠದಲ್ಲಿ ನಡೆದ ಅತಿಥಿ ಗಣ್ಯರಿಗೆ, ಸಮಾಜ ಸೇವಕರಿಗೆ ಗೌರವಾರ್ಪಣಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗುರುವಿಗೆ ಶ್ರೇಷ್ಠವಾದ ಸ್ಥಾನವಿದೆ. ಹೀಗಾಗಿ ಸಮಾಜ ಬದಲಾವಣೆಯಲ್ಲಿ ಗುರುಗಳ ಪಾತ್ರ ಪ್ರಮುಖ ಎಂದರು.
ದೇಹಕ್ಕೆ ರೋಗ ಬಂದಾಗ ವೈದ್ಯರಿಂದ ಔಷಧ ಪಡೆಯಬಹುದು, ಮನಸ್ಸು ಹಾಗೂ ಆತ್ಮಕ್ಕೆ ಅಂಟಿದ ರೋಗವನ್ನು ಅಳಿಸಿ ಹಾಕಲು ಅಧ್ಯಾತ್ಮಿಕ ಗುರುವಿನಿಂದ ಮಾತ್ರ ಸಾಧ್ಯ. ವೀರಶೈವರು ಒಗ್ಗಟ್ಟಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಸೇಡಂನ ಶಿವಶಂಕರ ಶ್ರೀ ಸಾನ್ನಿಧ್ಯ ಹಾಗೂ ತೊಟ್ನಳ್ಳಿಯ ತ್ರಿಮೂರ್ತಿ ಶ್ರೀ ಸಾನ್ನಿಧ್ಯವಹಿಸಿ ಮಾತನಾಡಿದರು.
ದಿಗ್ಗಾಂವ ಪಂಚಗೃಹ ಹಿರೇಮಠದ ಸಿದ್ಧವೀರ ಶ್ರೀ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಡಗುಂದಾ ಕರುಣೇಶ್ವರ ಸ್ವಾಮಿ, ಸೇಡಂದ ಶ್ರೀ, ಪಂಚಾಕ್ಷರಿ ಶ್ರೀ, ಯರಗೋಳದ ಸಂಗನಾಥ ಶ್ರೀ, ಅಳ್ಳೋಳ್ಳಿಯ ಸಂಗನಾಥ ಶ್ರೀ, ಹಲಕರ್ಟಿಯ ಬಾಲಯೋಗಿ ರಾಜಶೇಖರ ಶ್ರೀ ಸಮ್ಮುಖವಹಿಸಿದ್ದರು.
ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಶಿವರಾವ ಪಾಟೀಲ್ ಬೆಳಗುಂಪಾ, ನಿಲಯ್ಯ ಶ್ರೀ, ಸೂರ್ಯಕಾಂತ ಪಲ್ಲೇದ, ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೊಲ್ಲೂರ, ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಶಿವಕುಮಾರ್ ಸುಲ್ತಾನಪುರ, ಅಂಬರೇಶ ಸುಲೇಗಾಂವ, ಎಪಿಎಂಸಿ ಅಧಕ್ಷ ಶಿವಯೋಗಿ ಸಾಹು ಗುಂಡಗುರ್ತಿ, ಮಲ್ಲಿಕಾರ್ಜುನ ರೆಡ್ಡಿ ಇಜಾರ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಶರಣಬಸಪ್ಪ ಹಾಗರಗಿ, ಬಸವರಾಜ ಹೊಸಳ್ಳಿ, ಗುಂಡಣ್ಣ ಬಾಳಿ, ಚಂದ್ರಶೇಖರ ದಿಗ್ಗಾಂವಕರ್, ಸಿದ್ದಣಗೌಡ ಮಾಲಿಪಾಟೀಲ್, ತಿಪ್ಪಣ್ಣ ಸಂಗಾವಿ ಉಪಸ್ಥಿತರಿದ್ದರು. ಶರಣು ಕಲ್ಕಂ ಅಳ್ಳಳ್ಳಿ ಸ್ವಾಗತಿಸಿದರು.