ಗುಲ್ಬರ್ಗ: ಮೂವರ ಕೊಲೆಗೆ ಯತ್ನ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ನ.4
ಚಾಕು ಮತ್ತು ಬಡಿಗೆಯಿಂದ ಹೊಡೆದು ಮೂವರ ಕೊಲೆಗೆ ಯತ್ನಿಸಿದ ಘಟನೆ ನಗರದ ಆಳಂದ ರಸ್ತೆಯಲ್ಲಿ ನಡೆದಿದೆ.
ಶರಣಬಸಪ್ಪ ತಂದೆ ಮಾಣಿಕಪ್ಪ ಎಂಬಾತ ನಾಗು ಮತ್ತು ಈಶ್ವರ್ ಎಂಬುವರ ಜತೆ ಸೇರಿಕೊಂಡು ಆಳಂದ ರಸ್ತೆಯಲ್ಲಿ ಶನಿವಾರ ರಾತ್ರಿ 10.45ರ ಸುಮಾರಿಗೆ ಹೋಗುತ್ತಿದ್ದಾಗ ಶಿವಕುಮಾರ್ ಗುತ್ತೇದಾರ, ಅನೀಲ್ ಗುತ್ತೇದಾರ, ವೀರೇಶ ಸ್ವಾಮಿ, ಮಹೇಶ ಮತ್ತು ಮಲ್ಲಪ್ಪ ಎಂಬುವರು ಸೇರಿ ಚಾಕು ಮತ್ತು ಬಡಿಗೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಶರಣಬಸಪ್ಪನ ಸ್ನೇಹಿತ ಈಶ್ವರ, ಶಿವಕುಮಾರ್ ಗುತ್ತೇದಾರಗೆ ಹಣಕಾಸು ಸಂಸ್ಥೆಯಿಂದ ಸಾಲ ಕೊಡಿಸಿದ್ದ ಸಾಲ ವಾಪಸ್ ನೀಡುವಂತೆ ಕೇಳಿದ್ದಕ್ಕಾಗಿ ಶಿವಕುಮಾರ್ ಗುತ್ತೇದಾರ ಇತರರು ಸೇರಿ ತಮ್ಮ ಕೊಲೆಗೆ ಯತ್ನಿಸಿದ್ದಾರೆಂದು ಶರಣಬಸಪ್ಪ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.