ದೇವೇಗೌಡ ತೆಲ್ಲೂರ್ ಮನೆಯಲ್ಲಿ ನಾಗರಿಕರ ದೀಪಾವಳಿ
ಕ.ಪ್ರ. ವಾರ್ತೆ, ಗುಲ್ಬರ್ಗ, ನ.4
ಇಲ್ಲಿನ ಶ್ರೀಶೈಲ್ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಲಿಪಾಡ್ಯ ಆಚರಣೆಯನ್ನು ಬಡಾವಣೆಯ ನಾಗರಿಕರೆಲ್ಲರೂ ಸೇರಿ ಬಡಾವಣೆಯ ಅಭಿವೃದ್ಧಿ ಸಂಘದ ಅಧ್ಯಕ್ಷ ದೇವೇಗೌಡ ತೆಲ್ಲೂರ್ ಅವರ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಗೋವಿನ ಸಗಣಿಯಿಂದ ಪಾಂಡವರ ಸಾಮ್ರಾಜ್ಯ ನಿರ್ಮಿಸಿ ಕೋಟೆ ನಿರ್ಮಾಣ ಮಾಡಿ ಕೋಟೆಯ ಒಳಗಡೆ ಸಮೃದ್ಧಿಯ ಸಂಕೇತವಾಗಿ ಕುಟ್ಟುವುದು, ಬೀಸುವುದು, ಹಾಲು ಕರೆಯುವುದು, ಮೊಸರು ಕಡೆಯುವುದು ಸೇರಿದಂತೆ ಪಾಂಡವರ ಸಾಮ್ರಾಜ್ಯದ ಹೊರಗಡೆ ಕೌರವರ ಸಂಕೇತವಾಗಿ ಕಳ್ಳನನ್ನು ನಿರ್ಮಿಸಿ ಕೊನೆಯಲ್ಲಿ ಕಳ್ಳನ ಹೊಟ್ಟೆಯಲ್ಲಿ ಪಟಾಕಿಯಿಟ್ಟು ದ್ವಂಸ ಮಾಡಲಾಯಿತು. ಎಲ್ಲರೂ ಸಿಹಿ ತಿಂದು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭ ಬಡಾವಣೆಯ ಹಿರಿಯರಾದ ಶಿವರಾಜ ದೇವಪ್ಪ, ಸೋಮಶೇಖರ ದುತ್ತರಗಿ, ಪಾಂಡುಸಿಂಗ್, ಕ್ರಾಂತಿಕುಮಾರ್, ಮಹಾದೇವ ಪಾಟೀಲ್, ಶಾಮಲಾ ಕುಲಕರ್ಣಿ, ಪುಷ್ಪಾ ತಳವಾರ, ಮಾಲಿನಿ ಕುಲಕರ್ಣಿ, ಶಕುಂತಲಾ ದೇವಪ್ಪ, ರೇಖಾ ರಾಮಶೆಟ್ಟಿ, ಸುನಿತಾ ಠಾಕೂರ, ಶಂಕರೆಮ್ಮ ಹಿರೇಮಠ, ಅಂಬಿಕಾ ಠಾಕೂರ ಸೀನುಬಾಯಿ ಪಾಟೀಲ್, ಕಿರಣ ಪಾಟೀಲ್, ಅರುಣ ಪಾಟೀಲ್, ಗೀತಾ ಪಾಟೀಲ್ ಇತರರು ಇದ್ದರು.