ಯಡ್ರಾಮಿಯಲ್ಲಿ ಗುಂಡಿನ ದಾಳಿ: ವ್ಯಕ್ತಿ ಕೊಲೆ
ಗುಲ್ಬರ್ಗ/ಜೇವರ್ಗಿ: ದೀಪಾವಳಿ ಬಲಿಪಾಡ್ಯಮಿ ದಿನವಾದ ಸೋಮವಾರ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿಯಲ್ಲಿ ಗುಂಡಿನ ದಾಳಿಗೆ ಸಾಕ್ಷಿಯಾಗಿದ್ದು, ಈ ದಾಳಿಯಲ್ಲಿ ಗ್ರಾಪಂ ಮಾಡಿ ಸದಸ್ಯ, ಕಾಂಗ್ರೆಸ್ ಕಾರ್ಯಕರ್ತ ಲಿಂಗಣ, ಗೋಲ್ಲಾಳಪ್ಪ ರಾಯಪ್ಪಗೋಳ ಬರ್ಬರವಾಗಿ ಕೊಲೆಯಾಗಿದ್ದಾರೆ.
ದೀಪಾವಳಿ ಹಬ್ಬದ ಸಡಗರದಲ್ಲಿ ಕೇಳಿ ಬಂದಿರುವ ಈ ಗುಂಡಿನ ಸದ್ದಿನಿಂದಾಗಿ ಯಡ್ರಾಮಿ ವಲಯದಲ್ಲಿ ಜನತೆ ತಲ್ಲಣಗೊಂಡಿದ್ದಾರೆ.
ಸ್ಥಳೀಯವಾಗಿ ನ್ಯಾಯಬೆಲೆ ಅಂಗಡಿ ವಿಚಾರದಲ್ಲಿ ಉಂಟಾದ ಜಗಳ ಈ ರೀತಿ ಗುಂಡಿನ ದಾಳಿ, ಸಾವಿಗೆ ಕಾರಣವಾಗಿದೆ ಎಂದು ಯಡ್ರಾಮಿ ಪಿಎಸ್‌ಐ ಮಹಾಂತೇಶ ಪಾಟೀಲ್ ಹೇಳಿದ್ದಾರೆ. ತಾಪಂ ಮಾಜಿ ಸದಸ್ಯ ಬಸವರಾಜ ಕುಕನೂರ್ ಹಾಗೂ ಕೊಲೆಯಾಗಿರುವ ಲಿಂಗಣ, ನಡುವೆ ನ್ಯಾಯಬೆಲೆ ಅಂಗಡಿ ವಿಚಾರದಲ್ಲಿ ಕದನವಿತ್ತು.
ಮಾತಿನ ಚಕಮಕಿ ಶುರು: ಬೆಳಗ್ಗೆ ವಾಗ್ವಾದ, ಮಾತಿನ ಚಕಮಕಿ ಶುರುವಾಗಿದೆ. ಇದಾದ ಕೆಲ ಹೊತ್ತಲ್ಲೇ ಬಸವರಾಜ ಪೊಲೀಸ್ ಪಾಟೀಲ್ ಕುಕನೂರ್, ಅವರ ಪುತ್ರ ಸಿದ್ದು ಹಾಗೂ ಮಲ್ಲು ಶಾಂತಗೌಡ ಎಲ್ಲರೂ ಕೂಡಿಕೊಂಡು ಬಳಿಯಿದ್ದ ರೈಫಲ್‌ನಿಂದ ಗುಂಡು ಹಾರಿಸಿ ಲಿಂಗಣ, ನನ್ನು ಕೊಲೆ ಮಾಡಿದ್ದಾರೆಂದು ಮೃತನ ಸಹೋದರ ಮಂಜುನಾಥ ರಾಯಪ್ಪಗೋಳ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ರಾಯಪ್ಪಗೋಳ ಕುಟುಂಬದಿಂದ ಬಂದಿರುವ ದೂರನ್ನಾಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ತಕ್ಷಣ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪಿಎಸ್‌ಐ ಮಹಾಂತೇಶ ಪಾಟೀಲ್ ಕನ್ನಡಪ್ರಭ ಜೊತೆ ಮಾತನಾಡುತ್ತ ಮಾಹಿತಿ ನೀಡಿದ್ದಾರೆ. ಸಿದ್ದು ತಿಳಿದ ತಕ್ಷಣ ಜಿಲ್ಲಾ ಎಸ್ಪಿ ಅಮೀತ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಜೇವರ್ಗಿ ತಾಲೂಕಿನ ಯಡ್ರಾಮಿಗೆ ಭೇಟಿ ನೀಡಿ ಪ್ರಕರಣದ ಸುತ್ತಲಿನ ಸಂಗತಿಗಳನ್ನು ಪರಿಶೀಲಿಸಿದ್ದಾರೆ.
ಬಸವರಾಜ ಪೊಲೀಸ್ ಪಾಟೀಲ್ ಇವರ ನ್ಯಾಯಬೆಲೆ ಅಂಗಡಿ ವಿರುದ್ಧ ಕೊಲೆಯಾಗಿರುವ ಲಿಂಗಣ, ಈಚೆಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು ಎನ್ನಲಾಗಿದ್ದು, ಈ ಬೆಳವಣಿಗೆಯೂ ಕೊಲೆಗೆ ಕಾರಣವಾಗಿರಬಹುದು ಎಂದಿರುವ ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸಲಾಗುತ್ತಿದೆ.
ಅಲ್ಲಂಪ್ರಭು ಖಂಡನೆ
ಯಡ್ರಾಮಿಯಲ್ಲಿನ ಗುಂಡಿನ ದಾಳಿ, ಕಲೆ ಪ್ರಕರಣವನ್ನು ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ನೆಲೋಗಿ ಖಂಡಿಸಿದ್ದಾರೆ. ಕೊಲೆಯಾದ ಲಿಂಗಣ, ಕಾಂಗ್ರೆಸ್ ಕಾರ್ಯಕರ್ತ. ಜನಪರವಾಗಿ ಕಾರ್ಯ ಮಾಡುತ್ತಿದ್ದವರು. ಈ ಘಟನೆ ಬಗ್ಗೆ ಗಂಭೀರ ವಿಚಾರಣೆ ನಡೆಯಬೇಕು. ಸೂಕ್ತ ತನಿಖೆಗೆ ಎಸ್ಪಿ ಅವರನ್ನು ಆಗ್ರಹಿಸಲಾಗುವುದು ಎಂದಿದ್ದಾರೆ.