ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಶಾದಿಭಾಗ್ಯ'ದಲ್ಲಿ ಮತ ಕುತಂತ್ರ: ಶಂಕರ ಆರೋಪ

Lingaraj Badiger
Updated On : 5 Nov 2013, 11:40 am

ಗುಲ್ಬರ್ಗ:  ಕಾಂಗ್ರೆಸ್ ಸರ್ಕಾರ ಬಡ ಮುಸ್ಲಿಂ ಮಹಿಳೆಯರಿಗೆ ಜಾರಿಗೆ ತಂದಿರುವ “ËÛ¦ºÛVÚÀ’ ಯೋಜನೆಯಲ್ಲಿ ಮುಸ್ಲಿಂ ಮತ ಸೆಳೆಯುವ ಕುತಂತ್ರ ಅಡಗಿದೆ ಎಂದು ಬಿಜೆಪಿ ಮುಖಂಡ ಶಂಕರ ಜಾಧವ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಈ ಯೋಜನೆ ಪ್ರಟಿಸಿರುವುದು ಸ್ವಾಗತಾರ್ಹ. ಆದರೆ, ಬಡವರು ಕೇವಲ ಮುಸ್ಲಿಂರಲ್ಲಿ ಮಾತ್ರವಿಲ್ಲ. ಎಲ್ಲ ಜಾತಿ ಜನಾಂಗದಲ್ಲಿದ್ದಾರೆ. ಈ ಅಪರೂಪದ ಯೋಜನೆ ಎಲ್ಲ ಬಡ ಪಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಅನ್ವಯವಾಗಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ, ಶಿಖ್ ಎಂದು ಜಾತಿವಾರು ಮಾಡುವುದು ಸರಿಯಲ್ಲ ಎಂದಿದ್ದಾರೆ.
ಮೂವರ ಕೊಲೆಗೆ ಯತ್ನ: ದೂರು
ಗುಲ್ಬರ್ಗ: ಚಾಕು ಮತ್ತು ಬಡಿಗೆಯಿಂದ ಹೊಡೆದು ಮೂವರ ಕೊಲೆಗೆ ಯತ್ನಿಸಿದ ಘಟನೆ ನಗರದ ಆಳಂದ ರಸ್ತೆಯಲ್ಲಿ ನಡೆದಿದೆ. ಶರಣಬಸಪ್ಪ ತಂದೆ ಮಾಣಿಕಪ್ಪ ಎಂಬಾತ ನಾಗು ಮತ್ತು ಈಶ್ವರ್ ಎಂಬುವರ ಜತೆ ಸೇರಿಕೊಂಡು ಆಳಂದ ರಸ್ತೆಯಲ್ಲಿ ಶನಿವಾರ ರಾತ್ರಿ 10.45ರ ಸುಮಾರಿಗೆ ಹೋಗುತ್ತಿದ್ದಾಗ ಶಿವಕುಮಾರ್ ಗುತ್ತೇದಾರ, ಅನೀಲ್ ಗುತ್ತೇದಾರ, ವೀರೇಶ ಸ್ವಾಮಿ, ಮಹೇಶ ಮತ್ತು ಮಲ್ಲಪ್ಪ ಎಂಬುವರು ಸೇರಿ ಚಾಕು ಮತ್ತು ಬಡಿಗೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಶರಣಬಸಪ್ಪನ ಸ್ನೇಹಿತ ಈಶ್ವರ, ಶಿವಕುಮಾರ್ ಗುತ್ತೇದಾರಗೆ ಹಣಕಾಸು ಸಂಸ್ಥೆಯಿಂದ ಸಾಲ ಕೊಡಿಸಿದ್ದ ಸಾಲ ವಾಪಸ್ ನೀಡುವಂತೆ ಕೇಳಿದ್ದಕ್ಕಾಗಿ ಶಿವಕುಮಾರ್ ಗುತ್ತೇದಾರ ಇತರರು ಸೇರಿ ತಮ್ಮ ಕೊಲೆಗೆ ಯತ್ನಿಸಿದ್ದಾರೆಂದು ಶರಣಬಸಪ್ಪ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಜೂಜಾಡುತ್ತಿದ್ದ ಐವರ ಬಂಧನ
ಗುಲ್ಬರ್ಗ: ಇಲ್ಲಿನ ಆದರ್ಶ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜೂಜಾಡುತ್ತಿದ್ದ ಐವರನ್ನು ಬಂಧಿಸಿರುವ ಪೊಲೀಸರು ಅವರಿಂದ 5,475 ನಗದು ಜಪ್ತಿ ಮಾಡಿದ್ದಾರೆ. ಮಲ್ಲಣ್ಣಗೌಡ ತಂದೆ ತೇಜರಾವ ಪಾಟೀಲ್, ಶಿವಶಂಕರ ತಂದೆ ಹಣಮಂತರಾವ ಪಾಟೀಲ್, ಗುಂಡಪ್ಪ ತಂದೆ ತಿಪ್ಪಣ್ಣ ಹರಳಯ್ಯ, ವೀರೇಶ ತಂದೆ ಪರಮಾನಂದ ವಾಲಶೆಟ್ಟಿ, ಕುಮಾರ ಶಂಕರ ಕಟ್ಟಿಮನಿ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೆ ಹಲ್ಲೆ
ಗುಲ್ಬರ್ಗ: ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ಮೇಲೆ ಇಬ್ಬರು ಹಲ್ಲೆ ನಡೆಸಿದ ಘಟನೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ ಗ್ರಾಮದಲ್ಲಿ ನಡೆದಿದೆ. ಕೂಲಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ರೇಷ್ಮಾ ಗಂಡ ಚಂದಪ್ಪ ಕೊಡತೆ, ಚಂದಪ್ಪ ಕೊಡತೆ ಅವರ ಮೇಲೆ ಸುಧಾಕರ ತಂದೆ ಲಕ್ಷ್ಮಣ ಕೊಡತೆ, ಆತನ ಹೆಂಡತಿ ಶರಣಮ್ಮ ಎಂಬುವರು ಹಲ್ಲೆ ನಡೆಸಿದ್ದಾರೆ. ಸುಧಾಕರ ಎಂಬಾತ ಚಂದಪ್ಪನಿಗೆ ಕಲ್ಲಿನಿಂದ ಹೊಡೆದಿದ್ದು, ಸುಧಾಕರನ ಹೆಂಡತಿ ಶರಣಮ್ಮ ಚಂದಪ್ಪನ ಹೆಂಡತಿ ರೇಷ್ಮಾಳಿಗೆ ಕೂದಲು ಹಿಡಿದು ಎಳೆದಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement