ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುಭಾಷ ಕೆಜೆಪಿ ರಾಜ್ಯಕಾರ್ಯದರ್ಶಿ

Lingaraj Badiger
Updated On : 5 Nov 2013, 11:45 am

ಗುಲ್ಬರ್ಗ:  ಕರ್ನಾಟಕ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸುಭಾಷ ಬಿರಾದಾರ ನೇಮಕಗೊಂಡಿದ್ದಾರೆ. ರಾಜ್ಯದಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಬಿರಾದಾರ ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.
ಬಹುಜನ ಜಾಗೃತಿ ವೇದಿಕೆಗೆ ಆಯ್ಕೆ
ಗುಲ್ಬರ್ಗ:  ಬಹುಜನ ಜಾಗೃತಿ ವೇದಿಕೆ ಫರಹತಾಬಾದ್ ಗ್ರಾಮ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶರಣು ಡಾಂಗೆ, ಉಪಾಧ್ಯಕ್ಷರಾಗಿ ಶ್ರೀನಿವಾಸ ಬುಕ್ಕನ್, ಅಪ್ಪಾರಾಯ ಬುಕ್ಕನ್, ಜಗನ್ನಾಥ ಬುಕ್ಕನ್, ಲೋಕೇಶ ಬಾಳ, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಛಲವಾದಿ, ಸಂಘಟನಾ ಕಾರ್ಯದರ್ಶಿಯಾಗಿ ವಾಸ್ತವ ಖನ್ನಾ, ಸುರೇಶ ಹಾವನೂರ, ಕಮಲಾಕರ್ ಡಾಂಗೆ, ಸಹ ಕಾರ್ಯದರ್ಶಿಯಾಗಿ ಪ್ರದೀಪ ಹಾವನೂರ, ಖಜಾಂಚಿಯಾಗಿ ಭೀಮಶಾ ಬುಕ್ಕನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಧರ ಬುಕ್ಕನ್, ದಶರಥ ಡಾಂಗೆ, ಸಂದೀಪ ಡಾಂಗೆ, ಲೋಕೇಶ ಖನ್ನಾ ನೇಮಕಗೊಂಡಿದ್ದಾರೆ. ಈಚೆಗೆ ಫರಹತಾಬಾದ ಗ್ರಾಮದಲ್ಲಿ ನಡೆದ ಸಭೆಯಲ್ಲಿ ವಿಭಾಗೀಯ ಅಧ್ಯಕ್ಷ ಪ್ರಕಾಶ ಹಾಗರಗಿ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಎಂ. ಮತ್ತು ತಾಲೂಕು ಅಧ್ಯಕ್ಷ ರವಿ ಕೋರಿ, ಅರುಣಕುಮಾರ್ ಹುಗ್ಗಿ ಪಾಲ್ಗೊಂಡಿದ್ದರು.
ಶ್ರೀಶೈಲನಾಥ ಸಜ್ಜನಗೆ ಡಾಕ್ಟರೇಟ್
ಗುಲ್ಬರ್ಗ: ಶ್ರೀಶೈಲನಾಥ ಸಜ್ಜನ್ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಸಜ್ಜನ್ ಅವರು ಡಾ. ಟಿ.ಬಿ. ಕರೇಗೌಡರ್ ಅವರ ಮಾರ್ಗದರ್ಶನದಲ್ಲಿ 'ಬ್ಯಾಕ್ಟೀರಿಯಾದಿಂದ ವರ, ದ್ರವ್ಯ ಉತ್ಪಾದನೆ ಮತ್ತು ಅದರ ಉಪಯೋಗಗಳು' ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡನೆ ಮಾಡಿರುವ ಪ್ರಯುಕ್ತ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ.
ವೇತನ ಸಹಿತ ರಜೆ: ಕ್ರಮಕ್ಕೆ ಸ್ವಾಗತ
ಗುಲ್ಬರ್ಗ:  ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 2,340 ಉಪನ್ಯಾಸಕರಿಗೆ ಬಿ.ಇಡಿ. ಪದವಿ ಪೂರೈಸಲು ವೇತನ ಸಹಿತ ರಜೆ ನೀಡಲು ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಹಿತರಕ್ಷಣಾ ವೇದಿಕೆ ಸ್ವಾಗತಿಸಿದೆ. ಮೂಲಭೂತ ಸಮಸ್ಯೆ ಎಂದರೆ ಮೊದಲು ನಮಗೆ ಪ್ರೊಬೆಷನರಿ ಘೋಷಣೆ ಆಗಬೇಕು. ನಂತರ ಬಿ.ಇಡಿ. ವಿಚಾರ. ಈಗಾಗಲೇ ಸುಮಾರು ಉಪನ್ಯಾಸಕರು ಆಕಸ್ಮಿಕವಾಗಿ ಮರಣ ಹೊಂದಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರದಿಂದ ಯಾವ ನ್ಯಾಯವೂ ಸಿಕ್ಕಿಲ್ಲ. ಅದಕ್ಕಾಗಿ ಮೊದಲು ನಮ್ಮ ಪ್ರೊಬೆಷನರಿ ಘೋಷಣೆ ಮಾಡುವುದು ಅಗತ್ಯ ಎಂದು ಡಾ. ರಾಜೇಂದ್ರ ದೊಡ್ಮನಿ, ಪ್ರೊ. ಬಸವರಾಜೇಶ್ವರಿ ಪಾಟೀಲ್, ಡಾ. ಆಶಾ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement