ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

83 ಮಂದಿಗೆ ಉಚಿತ ತಪಾಸಣೆ

Lingaraj Badiger
Updated On : 6 Nov 2013, 10:53 am

ಗುಲ್ಬರ್ಗ: ನಗರದ ಬಸವೇಶ್ವರ ಬೋಧನಾ ಆಸ್ಪತ್ರೆಯ ಚರ್ಮರೋಗ ವಿಭಾಗ ವಿಶ್ವ ಸೋರಿಯಾಸಿಸ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸೋರಿಯಾಸಿಸ್ ತಪಾಸಣೆ ಶಿಬಿರದಲ್ಲಿ ಒಟ್ಟು 83 ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲ ರೋಗಿಗಳಿಗೆ ಲಿವರ್ ಫಂಕ್ಷನ್ ಟೆಸ್ಟ್ ಮೂಲಕ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ಹಾಗೂ ಔಷಧಿ ನೀಡಲಾಯಿತು. ತಪಾಸಣೆಗೆ ಒಳಪಟ್ಟ ಎಲ್ಲರಿಗೂ ತಿಂಗಳ ಕಾಲ ಉಚಿತ ತಪಾಸಣೆಯನ್ನು ಬಸವೇಶ್ವರ ಆಸ್ಪತ್ರೆಯ ಚರ್ಮರೋಗ ವಿಭಾಗ ಮಾಡಲಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಹರವಾಳ ತಿಳಿಸಿದ್ದಾರೆ. ಆಸ್ಪತ್ರೆ ಸಂಚಾಲಕ ಡಾ.ಭೀಮಾಶಂಕರ ಬಿಲಗುಂದಿ, ಎಂಆರ್ಎಂಸಿ ಪ್ರಾಚಾರ್ಯ ಡಾ. ಬಿ.ಮಲ್ಲಿಕಾರ್ಜುನ, ಡಾ. ಹರವಾಳ ಉಚಿತ ಔಷಧಿ ವಿತರಿಸಿದರು. ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಪಾಟೀಲ್ ನೇತೃತ್ವದಲ್ಲಿ ವಿಭಾಗದ ಎಲ್ಲ ವೈದ್ಯರು, ಸಿಬ್ಬಂದಿ ರೋಗಿಗಳ ತಪಾಸಣೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement