ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅತ್ಯಾಚಾರವೆಸಗಿದ್ದು 'ಪೊಲೀ'ಸ್!

Lingaraj Badiger
Updated On : 6 Nov 2013, 10:53 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಅ.5
ಚಿಂಚೋಳಿ -ಗುಲ್ಬರ್ಗ ರಾಜ್ಯ ಹೆದ್ದಾರಿ ಬಳಿಯ ಮುಲ್ಲಾಮಾರಿ ನದಿ ಸೇತುವೆಯಿಂದ ತಾಯಿ-ಅಜ್ಜಿ ಕೈ ತಪ್ಪಿಸಿಕೊಂಡು ನದಿಗೆ ಹಾರಿದ್ದ ಯುವತಿ ಅತ್ಯಾಚಾರಕ್ಕೊಳಗಾದವಳು!
  ಈ ಬಗ್ಗೆ ಯುವತಿ ಚಿಂಚೋಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ್ ತಳಕೇರಿ ಅವರು ತತ್ಕ್ಷಣಕ್ಕೆ ಜಾರಿಯಾಗುವಂತೆ ಆರೋಪಿ ಪೊಲೀಸ್ ಪೇದೆ ಮೋಹನ ರೆಡ್ಡಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಯುವತಿ ಹೇಳಿದ್ದೇನು?:  ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಕಮಲಾಪುರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮೋಹನರೆಡ್ಡಿ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಅತ್ಯಾಚಾರಕ್ಕೊಳಗಾಗಿ ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿಮ್ಮನಚೋಡದ ಯುವತಿ ದೂರಿನಲ್ಲಿ ಒತ್ತಾಯಿಸಿದ್ದಾಳೆ.
  ಚಿಂಚೋಳಿ ತಾಲೂಕಿನ ಹಸರಗುಂಡಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುಮಾಸ್ತೆಯಾಗಿ ಅನುಕಂಪದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಚಿಮ್ಮನಚೋಡಯ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪೇದೆ ಮೋಹನರೆಡ್ಡಿ ಅತ್ಯಾಚಾರವೆಸಗಿದ್ದಾನೆ. ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಇದರಿಂದ ಬೇಸರಗೊಂಡ ಯುವತಿ ಸೋಮವಾರ ಚಿಂಚೋಳಿ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಗೆ ಹೇಳಿದ್ದಾರೆ.
  ತೀವ್ರ ಗಾಯಗೊಂಡಿರುವ ಯುವತಿಯನ್ನು ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಒಳಪಟ್ಟಿರುವ ಯುವತಿ ಚಿಂಚೋಳಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ದೂರು ನೀಡಿ, ಕೂಡಲೇ ಆರೋಪಿ ಪೇದೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾಳೆ.
ತಲೆಮರೆಸಿಕೊಂಡ ಪೇದೆ:  ಯುವತಿ ಮೇಲೆ ಅತ್ಯಾಚಾರವೆಸಗಿ ಪೊಲೀಸ್ ಪೇದೆ ಎಂಬ ದರ್ಪದಿಂದ ಸೇವೆ ಸಲ್ಲಿಸುತ್ತಿದ್ದ ಮೋಹನರೆಡ್ಡಿ, ಯುವತಿ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿಯುತ್ತಿದಂತೆಯೇ ವೈಯಕ್ತಿಕ ಕಾರಣ ನೆಪವೊಡ್ಡಿ 3 ದಿನಗಳ ಕಾಲ ರಜೆ ಪಡೆದು ತಲೆಮರೆಸಿಕೊಂಡಿದ್ದಾನೆ. ಸೋಮವಾರದಿಂದ ಮೋಹನೆರೆಡ್ಡಿ ರಜೆ ಪಡೆದುಕೊಂಡಿದ್ದಾರೆ ಎಂದು ಕಮಲಾಪುರ ಪೊಲೀಸ್ ಠಾಣೆ ಮೂಲಗಳಿಂದ ತಿಳಿದುಬಂದಿದೆ.
ಪೇದೆ ಅಮಾನತು: ಯುವತಿಯನ್ನು ಅತ್ಯಾಚಾರವೆಸಗಿರುವ ಆರೋಪ ಹೊತ್ತಿರುವ ಕಮಲಾಪುರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮೋಹನರೆಡ್ಡಿ ಅವರನ್ನು ಮಂಗಳವಾರದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ ತಳಕೇರಿ “OÚ«Ú­sÚ®ÚúڒOæQ ತಿಳಿಸಿದ್ದಾರೆ.
ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ನೊಂದ ಯುವತಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯನ್ನು ಭೇಟಿಯಾಗಿ ಯೋಗಕ್ಷೇವು ವಿಚಾರಿಸಲಾಗಿದೆ. ಆಕೆ ನೀಡಿದ ದೂರಿನ ಆಧಾರದ ಮೇಲೆ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಮತ್ತು ರಜೆ ಮೇಲೆ ಊರಿಗೆ ತೆರಳಿರುವ ಪೇದೆ ವಾಪಸ್ ಬಂದ ಮೇಲೆ ಬಂಧಿಸಲಾಗುವುದು ಎಂದು ತಳಕೇರಿ ತಿಳಿಸಿದ್ದಾರೆ.

ವಾರದೊಳಗೆ ರೆಡ್ಡಿ ಬಂಧಿಸದಿದ್ದರೆ ಕೋಲಿ ಸಮಾಜದಿಂದ ಹೋರಾಟ: ಎಚ್ಚರಿಕೆ
ಯುವತಿ ಮೇಲೆ ಪೇದೆ ಅತ್ಯಾಚಾರ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ ರವಿರಾಜ ಕೋರವಿ ಹಾಗೂ ಇತರ ಮುಖಂಡರು ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಅತ್ಯಾಚಾರಕ್ಕೊಳಗಾದ ಯುವತಿ ಯೋಗಕ್ಷೇವು ವಿಚಾರಿಸಿ ಒಂದು ವಾರದೊಳಗೆ ಆರೋಪಿಯನ್ನು ಬಂಧಿಸಬೇಕು ಮತ್ತು ಸೇವೆಯಿಂದ ವಜಾಗೊಳಿಸಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಕೋಲಿ ಸಮಾಜ ಉಗ್ರ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ತುಕಾರಾಮ ಚಿತ್ತಾಪುರ, ಸಂಗಪ್ಪ ಚಿಮ್ಮನಚೋಡ, ಡಾ. ಓಂಕಾರ, ಸೈದಪ್ಪ ಸೇರಿ ಮತ್ತು ಯುವತಿಯ ಚಿಕ್ಕಪ್ಪ ಶಿವಪ್ಪ ಮದರಗಿ ಇದ್ದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement