ಇಂದಿನಿಂದ ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ಜೆಸ್ಕಾಂ ವ್ಯಾಪ್ತಿಯ ಅಫಜಲ್ಪುರ ತಾಲೂಕಿನ 765 ಕಿಲೋ ವ್ಯಾಟ್ ಜೋಡಣೆ ಹೊಸ ಮಾರ್ಗದ ಸುಧಾರಣೆ ಕೆಲಸ ಕೈಗೊಂಡಿರುವ ಪ್ರಯುಕ್ತ ತಾಲೂಕಿನ ವ್ಯಾಪ್ತಿಯ ಈ ಕೆಳಕಂಡ ಪ್ರದೇಶಗಳಲ್ಲಿ ನ. 6ರಿಂದ 16ರವರೆಗೆ ಬೆಳಗಿನ 8ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಗುಲ್ಬರ್ಗದ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಫಜಲ್ಪುರ ಉಪವಿತರಣಾ ಕೇಂದ್ರದ ವ್ಯಾಪ್ತಿಯ ಎಫ್-6 ಹಳಿಯಾಳ(ಎ), ಎಫ್-6 ಹಳಿಯಾಳ(ಬಿ) ಹಾಗೂ ಎಫ್-7 ಬಳ್ಳೂರ್ಗಿ ಫೀಡರಗಳ ಮೇಲೆ ಬರುವ ಹಳಿಯಾಳ, ಬಳ್ಳೂರ್ಗಿ, ಬಳ್ಳೂರ್ಗಿ ತಾಂಡಾ, 110.33.11 ಕೆ.ವಿ ಕರಜಗಿ ಉಪವಿತರಣಾ ಕೆಂದ್ರದ ವ್ಯಾಪ್ತಿಯ ಎಫ್-6 ನಂದರಗಾ ಹಾಗೂ ಎಫ್-11 ಜೇವರ್ಗಿ ಎನ್.ಜೆ.ವೈ ಹಾಗೂ ಗೌರ (ಬಿ) ಫೀಡರಗಳ ಮೇಲೆ ಬರುವ ಗೌರ (ಬಿ), ಗೌರ (ಕೆ), ಅಶೋಕ ನಗರ, ಬಂಕಲಗಾ, ದಿಕ್ಕಸಂಗಾ, ತೆಲ್ಲೋಣಿ, ಜೇವರ್ಗಿ (ಬಿ), ಜೇವರ್ಗಿ (ಕೆ) ಮತ್ತು ನಂದರಗಾ ಗ್ರಾಮ ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
11ರಂದು ತಾಪಂ ಸಾಮಾನ್ಯ ಸಭೆ
ಗುಲ್ಬರ್ಗ: ತಾಲೂಕು ಪಂಚಾಯತ್ ಅಧ್ಯಕ್ಷ ಚನ್ನವೀರಪ್ಪ ಎಂ. ಸಲಗರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತಿಯ ಸಾಮಾನ್ಯ ಸಭೆಯು ನ.11ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದುವರಿಕೆ ಸಭೆ 11ರಂದು
ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಪಂಚಾಯತಿಯ 9ನೇ ಸಾಮಾನ್ಯ ಸಭೆ ಕಳೆದ ಅ. 30ರಂದು ಜರುಗಿದ್ದು, ಈ ಸಭೆಯು ಅಪೂರ್ಣವಾಗಿರುವುದರಿಂದ ಜಿಪಂ ಅಧ್ಯಕ್ಷ ರಮೇಶ ಮರಗೋಳ ಅವರ ಅಧ್ಯಕ್ಷತೆಯಲ್ಲಿ ಕಳೆದ ಸಭೆಯ ಮುಂದುವರಿದ ಸಭೆಯನ್ನು ನ. 12ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯ್ತಿಯ ಹಳೇ ಸಭಾಂಗಣದಲ್ಲಿ ನಡೆಯಲಿದೆ ಎಂದು ಗುಲ್ಬರ್ಗ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
10ರಂದು ಕುರುಬ ಸಮಾಜ ಸಭೆ
ಜೇವರ್ಗಿ: ಬರುವ 20ರಂದು ನಡೆಯಲಿರುವ ಕನಕದಾಸರ ಜಯಂತ್ಯುತ್ಸವದ ನಿಮಿತ್ತ ಪಟ್ಟಣದಲ್ಲಿ ತಾಲೂಕು ಕುರುಬ ಸಮಾಜದ ಸಭೆ ಕರೆಯಲಾಗಿದೆ ಎಂದು ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ ಭಂಡಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಪಾಟೀಲ್ ಹರವಾಳ ತಿಳಿಸಿದ್ದಾರೆ. ನ. 10ರಂದು ಪಟ್ಟಣದಲ್ಲಿರುವ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದೆ.