ಇಂದು ನ್ಯಾಯಬೆಲೆ ಅಂಗಡಿದಾರರ ಸಭೆ
ಗುಲ್ಬರ್ಗ: ತಾಲೂಕು ಗ್ರಾಮಾಂತರ ಪ್ರದೇಶದ ನ್ಯಾಯಬೆಲೆ ಅಂಗಡಿದಾರರ ಸಂಘದ ಸಭೆಯು ನ. 6ರಂದು ನಗರದ ಆಮಂತ್ರಣ ಹೋಟೆಲ್ನಲ್ಲಿ ನಡೆಯಲಿದೆ. ಜಿಲ್ಲೆಯ ಪ್ರಥಮ ಸಭೆ ಇದಾಗಿದ್ದು, ನ್ಯಾಯಬೆಲೆ ಅಂಗಡಿ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಅವರು ಸಭೆಗೆ ಆಗಮಿಸಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಟಿ. ತಾಯಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಪಾಟೀಲ್, ಗುಲ್ಬರ್ಗ ಉಸ್ತುವಾರಿ ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ ಮಂಡೋಳೆ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಆಹಾರ ಧಾನ್ಯ, ಸೀಮೆ ಎಣ್ಣೆ ವಿತರಕರು ಈ ಸಭೆಗೆ ಆಗಮಿಸಲು ಅಣ್ಣಾರಾವ ಪಾಟೀಲ್ ಪರಮೇಶ್ವರ ಕೋರಿದ್ದಾರೆ.
--
9ರಂದು ರಾಚಣ್ಣ ದೇವರ ಪಲ್ಲಕ್ಕಿ ಉತ್ಸವ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಪಟ್ಟಣದ ರಾಚಣ್ಣ ದೇವರ ಜಾತ್ರಾ ನಿಮಿತ್ತ ನ.9ರಂದು ಪಲ್ಲಕ್ಕಿ ಉತ್ಸವ ನಡೆಯಲಿದೆ. ಈಗಾಗಲೇ ರಮೇಶಕುಮಾರ್ ಯಾಳಗಿ ಅವರಿಂದ ಆರಂಭವಾಗಿರುವ ದೇವಿ ಪುರಾಣ ನ.7ರಂದು ಮಂಗಳಗೊಳ್ಳುವುದು. ಅಂದು ಕಾಳಿಕಾದೇವಿ ಮತ್ತು ನಂದಿ ಮೂರ್ತಿ ಸ್ಥಾಪನೆ ಸಿದ್ದರಾಮ ಶಿವಾಚಾರ್ಯರು ನೆರವೇರಿಸಲಿದ್ದಾರೆ. ಚನ್ನಮಲ್ಲ ಶಿವಾಚಾರ್ಯರು ನೇತೃತ್ವ ವಹಿಸುವರು. ನ.8ರಂದು ರಾತ್ರಿ 8 ಗಂಟೆಗೆ ಅಗ್ನಿಪುಟು ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ. ನ.9ರಂದು ಬೆಳಗ್ಗೆ 5 ಗಂಟೆಗೆ ಅಗ್ನಿಪ್ರವೇಶ ಕಾರ್ಯಕ್ರಮ ನಂತರ ರಾಚಣ್ಣ ದೇವರ ಪಲ್ಲಕ್ಕಿ ಮರೆವಣಿಗೆ ಪುರವಂತರ ಸೇವೆಯೊಂದಿಗೆ ಗ್ರಾಮದ ಪ್ರಮುಖ ಬೀದಿಯಿಂದ ದೇವಸ್ಥಾನದವರೆಗೆ ತಲುಪುವುದು. ಭಕ್ತರು ಭಾಗವಹಿಸಬೇಕು ಎಂದು ಕೋರಲಾಗಿದೆ.